ಹಿರಿಯೂರು: ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಅವರ ಸರಳ ಜೀವನ, ಆದರ್ಶ, ಬದ್ಧತೆ ಮಾದರಿಯಾಗಿದೆ ಎಂದು ಗೌತಮ್ ಅಕಾಡೆಮಿ ಶಾಲೆ ಆಡಳಿತಾಧಿಕಾರಿ ಒ.ಪಿ.ಪುಷ್ಪಾ ಪ್ರಕಾಶ್ ಹೇಳಿದರು.
ನಗರದ ಗೌತಮ್ ಅಕಾಡೆಮಿ ಶಾಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ವತಿಂದ ಶುಕ್ರವಾರ ಹಮ್ಮಿಕೊಂಡಿದ್ದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಕಷ್ಟು ಅಪಮಾನಗಳು ಎದುರಾದರೂ ಎದೆಗುಂದದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಕೀರ್ತಿ ಇವರದ್ದಾಗಿದೆ. ಇವರ ಸೇವೆ ಗುರುತಿಸಿ ಅಂದಿನ ಬ್ರಿಟಿಷ್ ಸರ್ಕಾರ ದೇಶದ ಮೊದಲ ಶಿಕ್ಷಕಿ ಎಂಬ ಬಿರುದು ಕೊಟ್ಟಿದೆ ಎಂದು ತಿಳಿಸಿದರು.
ಉಪನ್ಯಾಸಕ ಈ.ನಾಗೇಂದ್ರಪ್ಪ ಮಾತನಾಡಿ, ಅನಿಷ್ಠ ಪದ್ಧತಿಯ ವಿರೋಧವಿದ್ದ ಫುಲೆ, ವಿಧವೆಯರು, ಅಶಕ್ತ ಮಹಿಳೆಯರಿಗೆ ಪುರ್ನವಸತಿ ಕೇಂದ್ರ ಸ್ಥಾಪಿಸಿ ನೊಂದವರಿಗೆ ದಾರಿ ದೀಪವಾಗಿದ್ದರು ಎಂದರು.
ಮುಖ್ಯಶಿಕ್ಷಕಿ ವೈಶಾಲಿ, ಶಿಕ್ಷಕರಾದ ಮೇಘನಾ, ಜಯಶೀಲಾ, ಪ್ರಿಯಾಂಕಾ, ಅಂಬುಜಾ, ಉಪನ್ಯಾಸಕರಾದ ಕೆ.ರಂಗಪ್ಪ, ಎಚ್.ಆರ್.ಲೋಕೇಶ್, ಶಾಂತಕುಮಾರ್, ರಜಾಕ್‌ಸಾಬ್, ಪ್ರೇಮಾನಂದ ಗೌತಮ್, ದಯಾನಂದ್ ಇತರರಿದ್ದರು.