More

    ಚಿಂತನಾ ಶಕ್ತಿ ಹೆಚ್ಚಳಕ್ಕೆ ವಿಜ್ಞಾನವಸ್ತು ಪ್ರದರ್ಶನ ಪೂರಕ

    ಹಿರಿಯೂರು: ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ನಗರಸಭೆ ಮಾಜಿ ಸದಸ್ಯ ಜಿ.ಪ್ರೇಮ್‌ಕುಮಾರ್ ಹೇಳಿದರು.

    ನಗರದ ಯುರೋ ಕಿಡ್ಸ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

    ವಿಜ್ಞಾನವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಜತೆಗೆ ಸೃಜನಶೀಲತೆ, ಕೌಶಲ ಹಾಗೂ ಕ್ರಿಯಾಶೀಲತೆ ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿದರೆ ಭವಿಷ್ಯದಲ್ಲಿ ದೇಶ ತಂತ್ರಜ್ಞಾನ ಕ್ಷೇತ್ರದಲ್ಲಿ ಬಲಿಷ್ಠವಾಗಲಿದೆ ಎಂದು ತಿಳಿಸಿದರು.

    ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿನ ನೂತನ ಬೆಳವಣಿಗೆ ಸರ್ವರಿಗೂ ತಲುಪಿಸಬೇಕಾಗಿದೆ. ಪರಿಸರಸ್ನೇಹಿ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದರು.

    ವಿಜ್ಞಾನವಸ್ತು ಪ್ರದರ್ಶನದಲ್ಲಿ ವಿದ್ಯುತ್ ಬಳಕೆ, ಉತ್ಪಾದನೆ, ರಾಕೆಟ್ ಉಡಾವಣೆ, ಜೈವಿಕ ಇಂಧನ ಬಳಕೆ, ಸುಸ್ಥಿರ ಪರಿಸರ ನಿರ್ಮಾಣ, ಸೌರಶಕ್ತಿ ಸದ್ಬಳಕೆ, ಮಾಹಿತಿ-ತಂತ್ರಜ್ಞಾನ ಕುರಿತು ಮಕ್ಕಳು ಪ್ರಾತ್ಯಕ್ಷಿಕೆ ನೀಡಿದರು.

    ಸಂಸ್ಥೆ ಅಧ್ಯಕ್ಷ ಎಚ್.ಯು.ಘನಶಂಕರ್, ಶಿಕ್ಷಕರಾದ ಕೀರ್ತನಾ, ಅನುಷಾ, ನೇತ್ರಾವತಿ, ಆಶಾ, ವಿಕ್ಟೋರಿಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts