More

    ಕೆರೆ ತುಂಬಿಸಲು ವಿಶೇಷ ಯೋಜನೆ

    ಹಿರಿಯೂರು: ವಿವಿ ಸಾಗರ-ಗಾಯತ್ರಿ ಜಲಾಶಯದಲ್ಲಿ ಲಭ್ಯವಾಗುವ ಜಲಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ನೀರಾವರಿ, ಕುಡಿವ ನೀರು ಹಾಗೂ ಕೆರೆ ತುಂಬಿಸಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ತಾಲೂಕಿನ ಈಶ್ವರಗೆರೆ ಗ್ರಾಮದಲ್ಲಿ ಗುರುವಾರ ಜಲಾಮೃತ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ವಿ.ವಿ.ಸಾಗರ ಮತ್ತು ಗಾಯತ್ರಿ ಜಲಾಶಯ ತಾಲೂಕಿಗೆ ಪ್ರಕೃತಿ ಕೊಟ್ಟಿರುವ ವರ. ನಮ್ಮಲ್ಲಿನ ಜಲಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡರೆ ಬಯಲು ಸೀಮೆಯನ್ನು ಹಸಿರಾಗಿಸಬಹುದು. ಈಗಾಗಲೇ ವೇದಾವತಿ ನದಿ ಪಾತ್ರದಲ್ಲಿ ಬ್ಯಾರೇಜ್ ನಿರ್ಮಾಣದಿಂದ ಅಂತರ್ಜಲ ಹೆಚ್ಚಾಗಿ ಹತ್ತಾರು ಹಳ್ಳಿಗಳ ಕುಡಿವ ನೀರಿನ ಸಮಸ್ಯೆ ದೂರಾಗಿದೆ. ಮುಂಬರುವ ದಿನದಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೂ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

    ಜೆ.ಜಿ.ಹಳ್ಳಿ-ಐಮಂಗಲ ಹೋಬಳಿಗೆ ಶಾಶ್ವತ ಕುಡಿವ ನೀರು ಒದಗಿಸುವ ಬಹುಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿದ್ದು, ಶೀಘ್ರವೇ ಜನರಿಗೆ ಕುಡಿವ ನೀರು ಲಭ್ಯವಾಗಲಿದೆ ಎಂದರು.

    ಧರ್ಮಪುರ ಹೋಬಳಿಗೆ ವಿವಿ ಸಾಗರ ಜಲಾಶಯದಿಂದ ನೇರ ಪೈಪ್‌ಲೈನ್ ಮೂಲಕ ಕುಡಿವ ನೀರು ಪೂರೈಕೆಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

    ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಬರಪೀಡಿತ ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಜಲಾಮೃತ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.. ಇದರ ಜತೆಗೆ ಪೂರ್ವಜರು ಕಟ್ಟಿಸಿದ ಕೆರೆ, ಕಟ್ಟೆ ಹಳ್ಳ-ಕೊಳ್ಳಗಳನ್ನು ಸಂರಕ್ಷಿಸಿದರೆ ಬಯಲು ಸೀಮೆ ಹಸಿರಾಗಲಿದೆ ಎಂದರು.

    ತಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ಇಒ ಹನುಮಂತಪ್ಪ, ಸಂತೋಷ್, ಜಲಾಮೃತ ಯೋಜನೆ ನಿರ್ದೇಶಕ ನಿಜಲಿಂಗಪ್ಪ, ಎಇಇ ಶ್ರೀರಂಗಪ್ಪ, ಜಗದೀಶ್, ಮೋಹನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts