ಆರನಕಟ್ಟೆಯಲ್ಲಿ ಕಾನೂನು ಅರಿವು

ಹಿರಿಯೂರು: ಸಂವಿಧಾನ ಕಾನೂನುಗಳ ತಾಯಿಯಾಗಿದ್ದು, ಅದಕ್ಕೆ ಗೌರವಿಸಬೇಕಾದುದು ಪ್ರಜೆಗಳ ಕರ್ತವ್ಯ ಎಂದು ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ ತಿಳಿಸಿದರು.

ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಘಟಕದಿಂದ ತಾಲೂಕಿನ ಆರನಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದ ಆಶಯಗಳ ಅನ್ವಯ ಕಾಯ್ದೆ, ಕಾನೂನು ರಚನೆಯಾಗಿವೆ. ಪ್ರಜೆಗಳ ಹಿತರಕ್ಷಣೆ ಕಾಯುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಸರ್ವರೂ ಸಂವಿಧಾನ ಗೌರವಿಸಿ ಕಾನೂನು ಪಾಲಿಸಿದರೆ, ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದರು.

ವಕೀಲರಾದ ಎ.ಮಹಲಿಂಗಪ್ಪ, ಧೃವಕುಮಾರ್ ವಿವಿಧ ಕಾನೂನುಗಳ ಮಾಹಿತಿ ನೀಡಿದರು. ಶಿಬಿರಾಧಿಕಾರಿ ಎಲ್.ಬಿ.ಅಶೋಕ್, ನಾರಾಯಣಸ್ವಾಮಿ, ಶಿವಕುಮಾರ್, ರಾಮಸ್ವಾಮಿ, ವಾಸುದೇವ್, ಶಿವಕುಮಾರಸ್ವಾಮಿ ಇತರರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *