ನಡೆದು ಬಂದ ಹಾದಿ ಮರೆಯದಿರಿ

ಹಿರಿಯೂರು: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು ಕುಟುಂಬ ಹಾಗೂ ಸಮಾಜಕ್ಕೆ ಆಧಾರವಾಗಬೇಕು ಎಂದು ಆರ್ಯವೈಶ್ಯ ಸಮಾಜದ ಗೌರವಾಧ್ಯಕ್ಷ ಕೆ.ಆರ್.ವೆಂಕಟೇಶ್ ತಿಳಿಸಿದರು.

ಜಿಲ್ಲಾ ಆರ್ಯವೈಶ್ಯ ಮಹಾಸಭಾದಿಂದ ಇಲ್ಲಿನ ಕನ್ನಿಕಾ ಮಹಲ್‌ನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉನ್ನತ ಸ್ಥಾನ ತಲುಪಿದವರು ಸಮುದಾಯದ ಬಡ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಬೇಕು ಎಂದರು.

ಸಮಾಜದ ಮುಖಂಡ ಎಲ್.ಆನಂದಶೆಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗುತ್ತಿದೆ. ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಸಾಧಿಸಿ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಹಿರಿಯೂರು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಚ್.ಎಸ್.ನಾಗರಾಜ ಗುಪ್ತ, ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಡಿ. ಪುಟ್ಟರಾಜು, ಮುಖಂಡರಾದ ಆರ್.ಪ್ರಕಾಶ್‌ಕುಮಾರ್, ಚಳ್ಳಕೆರೆ ರಾಮಮೋಹನ್, ಎಂ.ಎಲ್.ನಾಗರಾಜ್, ಎಂ.ಎಚ್.ಪ್ರಾಣೇಶ್, ಕೆ.ವಿ.ಶಂಕರಾನಂದ ಇತರರಿದ್ದರು.

ಐದು ಲಕ್ಷ ರೂ ಪರಿಹಾರ: ಸಂಘದಿಂದ ಸಮಾಜದ ವಿದ್ಯಾರ್ಥಿಗಳ ಶಿಕ್ಷಣದ ನೆರವಿಗೆ 30 ಸಾವಿರ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಅಮರಜ್ಯೋತಿ ಯೋಜನೆಯಡಿ 2,100 ರೂ. ಶುಲ್ಕ ಪಾವತಿಸಿ ಸದಸ್ಯರಾದವರಿಗೆ, ಮೃತಪಟ್ಟಾಗ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ವಿ.ಅಮರೇಶ್ ತಿಳಿಸಿದರು.

Leave a Reply

Your email address will not be published. Required fields are marked *