ಜ್ಞಾನದ ಬೆಳಕು ನೀಡಿದ ಚೇತನ: ಗೌತಮ ಬುದ್ಧ ಜಯಂತಿ

ಹಿರಿಯೂರು: ಜಗತ್ತಿಗೆ ಜ್ಞಾನದ ಬೆಳಕು ತೋರಿದ ಮಹಾನ್ ಚೇತನ ಗೌತಮ ಬುದ್ಧ ಎಂದು ಪ್ರಾಚಾರ್ಯ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮ ಕಾರ್ಯಕ್ರಮ ಉದ್ಘಾಟಿಸಿ, ದೇಶದಲ್ಲಿ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ನಾಂದಿ ಹಾಡಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ಅಜ್ಞಾನ, ಅಂಧಕಾರ, ಮೌಢ್ಯಗಳಿಂದ ಮಾನವರ ಬದುಕು ದುಸ್ತರವಾಗಿದ್ದ ಸಂದರ್ಭದಲ್ಲಿ ಬದುಕಿನ ಅರ್ಥ ಹಾಗೂ ಜ್ಞಾನದ ಬೆಳಕು ನೀಡಿದರು. ವಾಸ್ತವ ಜೀವನ ಬಗ್ಗೆ ಮಾನವರಿಗೆ ಮಾರ್ಗದರ್ಶನ ಮಾಡಿ ಬದುಕು ಹಸನುಗೊಳಿಸಿದರು. ಸಮಾನತೆ, ನೈತಿಕ ಜೀವನದ ಮಹತ್ವ ಬೋಧಿಸಿದರು. ಕರುಣೆ, ಪ್ರೀತಿ, ಸಹಕಾರಗಳ ಅಗತ್ಯತೆ ಅರ್ಥೈಯಿಸಿದ ಮಹಾನ್ ಸಂತ ಎಂದು ಬಣ್ಣಿಸಿದರು.

ಉಪನ್ಯಾಸಕರಾದ ಶಾಂತಕುಮಾರ್, ರಂಗಪ್ಪ, ನಾಗೇಂದ್ರಪ್ಪ, ಲೋಕೇಶ, ಮಂಜು, ರಜಾಕ್, ಮುಖ್ಯಶಿಕ್ಷಕಿ ವೈಶಾಲಿ, ಪ್ರಕಾಶ್ ಇತರರಿದ್ದರು.

Leave a Reply

Your email address will not be published. Required fields are marked *