ಹಿರಿಯೂರು: ಬಡವರು, ನಿರ್ಗರ್ತಿಕರು, ಕೂಲಿ ಕಾರ್ಮಿಕರ ಹಸಿವು ನೀಗಿಸಲು ಭೋಜನಾ ಕೇಂದ್ರ ತೆರೆಯಲಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಆರಂಭಿಸಿರುವ ಭೋಜನಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ, ಜನರಿಗೆ ಹೋಳಿಗೆ ಊಟ ಬಡಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಜಿ.ಪ್ರೇಮ್‌ಕುಮಾರ್, ದ್ಯಾಮಣ್ಣ, ಹರ್ಷ, ಎಂ.ಎಸ್.ರಾಘವೇಂದ್ರ, ಹಾಲಪ್ಪ, ಮಲ್ಲೇಶ್, ಆರಾಧ್ಯ ಇತರರಿದ್ದರು.