ಹಿರಿಯೂರು: ತಾಲೂಕಿನ ಬೇತೂರು ಪಾಳ್ಯ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೋಡಿ ತಿಮ್ಮಪ್ಪ ಸ್ವಾಮಿ ನೂತನ ದೇಗುಲ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮ ಫೆ.5 ರಿಂದ 7ರವರೆಗೆ ನಡೆಯಲಿದೆ.
ಫೆ.5ರಂದು ಗ್ರಾಮ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ ಪೂಜೆ, ಗರುಡ ಉತ್ಸವ, ಕಳಸ ಮೆರವಣಿಗೆ, ಹೋಮ-ಹವನ, ನಾಗರ ಪ್ರತಿಷ್ಠಾಪನೆ. 6ಕ್ಕೆ ಗಣಪತಿ ಪೂಜೆ, ಸ್ವಾಮಿ ಶಾಂತನಂದ ತೀರ್ಥರು-ಶ್ರೀ ದಾಸಪ್ಪ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧ್ವಜ ಕುಂಭಾರಾಧನೆ, ಕಳನ್ಯಾಸ, ಪ್ರಾಣ ಪ್ರತಿಷ್ಠಾದಿ ಹೋಮ, ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ.
ಫೆ.7ರಂದು ಗೋದರ್ಶನ, ಅಭಿಷೇಕ, ಯಾಗಶಾಲ ಪ್ರವೇಶ, ದ್ವಾರ ತೋರಣ ಕುಂಭಾರಾಧನೆ, ಶ್ರೀಸ್ವಾಮಿಗೆ ಪ್ರಥಮಾರಾಧನೆ, ಕಲ್ಯಾಣೋತ್ಸವ, ಅನ್ನಸಂತರ್ಪಣೆ ಇತರ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ.
ಶ್ರೀ ನಂಜಾವಧೂತ ಸ್ವಾಮೀಜಿ, ಶಾಸಕಿ ಕೆ.ಪೂರ್ಣಿಮಾ, ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ವೀರಭದ್ರಯ್ಯ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಡಿ.ಸುಧಾಕರ್, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ದೇಗುಲದ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಸೀತಾರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.