ಸಹಕಾರ ಸಂಘಗಳ ಕೊಡುಗೆ ಅಪಾರ

ಹಿರೇಮುರಾಳ: ಗ್ರಾಮೀಣ ರೈತರ ಅರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ಮುದ್ದೇಬಿಹಾಳ ತಾಲೂಕು 2ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶರಣ ಶಿವಣ್ಣ ಗುಡಗುಂಟಿ ಹೇಳಿದರು.
ಗ್ರಾಮದ ಶಂಕರ ನೇಕಾರ ಸಹಕಾರಿ ಸೌಲಭ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 15ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯಪುರದ ಕೃಷಿ ಕಾಲೇಜು ಕೃಷಿ ವಿಸ್ತರಣಾಧಿಕಾರಿ ಡಾ. ಆರ್.ಬಿ. ಬೆಳ್ಳಿ, ಬ್ಯಾಂಕ್ ಅಧ್ಯಕ್ಷ ಬಸವಂತರಾಯ ಭೋವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಡಿವಾಳಯ್ಯ ಹಿರೇಮಠ, ಪಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪ್ರಸನ್ನ ಜಾಗೀರದಾರ, ಸುನೀಲ ಜಾಗೀರದಾರ, ಮಲ್ಲಣ್ಣಗೌಡ ಪಾಟೀಲ, ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ನಿಂಗಣ್ಣ ರಾಮೋಡಗಿ, ನಿರ್ದೇಶಕರಾದ ಬಸವರಾಜ ಜೈನಾಪುರ, ಅಡಿವೆಪ್ಪ ನಾಡಗೌಡ್ರ, ಬಸಯ್ಯ ಗುರುಮಠ, ಎಸ್.ಎಂ. ಯಾಳವಾರ, ಬಸವರಾಜ ಸರೂರ, ಭೂಮಣ್ಣ ತೋಗರಿ, ರಮೇಶ ಇಂಗಳೇಶ್ವರ, ಶೇಖಪ್ಪ ನಾರಯಣಪುರ, ರೇಣುಕಾ ನಾಗರಬೆಟ್ಟ, ಈರಮ್ಮ ಛಟ್ಟಿ, ಎಸ್.ಎಂ. ಸುಲ್ತಾನಪುರ, ಎ.ಬಿ. ಬಾಗೇವಾಡಿ, ಮತ್ತತಿರರು ಹಾಜರಿದ್ದರು. ರುದ್ರು ರಾಮೋಡಗಿ ನಿರೂಪಿಸಿದರು. ಚಂದ್ರಶೇಖರ ಕಮ್ಮಾರ ವಂದಿಸಿದರು.

ವಿದ್ಯಾರ್ಥಿಗಳು, ಗಣ್ಯರಿಗೆ ಸನ್ಮಾನ: 2ನೇ ಶರಣ ಸಾಹಿತ್ಯ ಸಮೇಳನದ ಸರ್ವಾಧ್ಯಕ್ಷ ಶರಣ ಶಿವಣ್ಣ ಗುಡಗುಂಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ, ಡಾ. ಪ್ರಭುಗೌಡ ಪಾಟೀಲ (ಚಚನೂರ), ಕೇಂದ್ರ ಸರ್ಕಾರದ ಉದ್ಯೋಗ ರತ್ನ ಪುರಸ್ಕೃತ ಪರಶುರಾಮ ಪವಾರ, ನಾಲತವಾಡದ ರಾಯಣಗೋಳ ತಾತರಡ್ಡಿ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯು ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *