ಪ್ರಕೃತಿಯ ಮುಂದೆ ಯಾವ ಯೋಜನೆ ನಿಲ್ಲದು

ಮೂರ್ನಾಡು :   ಬಾಗುವುದು ಬದುಕು. ಬೀಗುವುದು ಬದುಕಲ್ಲ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡು ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು

ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಅವರ ಆದರ್ಶಗಳು ಎಲ್ಲರ ಹೃದಯದಲ್ಲಿ ಇರಬೇಕು. ಕೇವಲ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಮಾಲೆ ಹಾಕುವುದರಿಂದ ಪ್ರಯೋಜನವಿಲ್ಲ. ನಮ್ಮ ದೇಶದಲ್ಲಿರುವುದು ಟೇಕ್ ಕೇರ್ ಸಂಸ್ಕೃತಿ, ಡೋಂಟ್ ಕೇರ್ ಸಂಸ್ಕೃತಿ ಅಲ್ಲ. ನಮ್ಮ ಯಾವುದೇ ಯೋಜನೆಗಳು ಪ್ರಕೃತಿಯ ಮುಂದೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ವಿದ್ಯೆ ಪವಿತ್ರವಾದುದ್ದು, ಆದರೆ ಈಗಿನ ವಿದ್ಯಾ ಕ್ಷೇತ್ರಗಳ ದೃಷ್ಟಿಕೋನವೇ ಬೇರೆಯಾಗಿದೆ. ಸಂಬಳಕ್ಕಾಗಿಯೇ ಕರ್ತವ್ಯ ನಿರ್ವಹಿಸಿದರೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಸ್ಥಗಿತವಾಗುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುವುದೀಗ ಕುಡಿದರೆ ಮೆಟ್ಟಲು ಜಾರದಂತಿರಬೇಕು ಎನ್ನುವಂತಾಗಿದೆ. ಪ್ರಪಂಚದಲ್ಲೇ ರೈತನನ್ನು ಒಬ್ಬ ಯೋಗಿ ಎಂದು ಕರೆದುಕೊಂಡ ನಾಡು ಕರ್ನಾಟಕ ಎಂದು ಬಣ್ಣಿಸಿದರು.

ದೇಶದ ಮಹಾನುಭಾವರನ್ನೆಲ್ಲಾ ಇಂದಿನವರು ಮರೆಯುತ್ತಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಕನ್ನಡ ಭಾಷೆಯನ್ನು ಕನ್ನಡಿಗರೆ ಮರೆಯುತ್ತಿದ್ದಾರೆ. ಅನ್ಯ ಭಾಷಿಗರು ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಮಾತೃ ಭಾಷೆಯನ್ನು ಮರೆಯಬಾರದು. ತಂದೆ, ತಾಯಿಂದಿರು ತಮ್ಮ ಮಕ್ಕಳಿಗಾಗಿ ಎಲ್ಲವನ್ನು ತ್ಯಾಗ ಮಾಡುತ್ತಾರೆ. ಅವರನ್ನು ಮನೆಯಿಂದ ಹೊರದೂಡುವುದು ಧರ್ಮವಲ್ಲ. ಪಾಲಕರಿಗೆ ನಗು ಕೊಡಲು ಸಾಧ್ಯವಾಗದಿದ್ದರೂ ನೋವನ್ನಂತು ನೀಡಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜಾ ಮಾದಪ್ಪ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಕುಶಾಲಪ್ಪ, ಸುಶೀಲಾ, ಮೂರ್ನಾಡು ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ.ಪ್ರಶಾಂತ್, ಕಾರ್ಯದರ್ಶಿ ಕೆ.ಜಿ. ಹರೀಶ್, ಖಜಾಂಚಿ ಎಂ.ಸಿ.ನವೀನ್, ಪತ್ರಕರ್ತ ಎಂ.ಎನ್.ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕಿ ಕಮಲು ಮುದ್ದಯ್ಯ ಉಪಸ್ಥಿತರಿದ್ದರು.