More

  ಚಿನ್ನದ ಮಾಂಗಲ್ಯ ದೋಚಿದ್ದ ಆರೋಪಿ ಬಂಧನ; 11 ಗ್ರಾಂ ತೂಕದ ಸರ ವಶ

  ಹಾವೇರಿ: ಮಹಿಳೆಯೊಬ್ಬಳ ಮಾಂಗಲ್ಯ ಸರ ದೋಚಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಹಿರೇಕೆರೂರ ಠಾಣೆ ಪೊಲೀಸರು ಬಂಧಿಸಿ ಆತನಿಂದ 11 ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.
  ಹಿರೇಕೆರೂರ ತಾಲೂಕಿನ ಚನ್ನಳ್ಳಿ ತಾಂಡಾ ನಿವಾಸಿ ಲೋಕೇಶ ರಾಮ್ಲಪ್ಪ ಲಮಾಣಿ ಬಂಧಿತ ಆರೋಪಿ. ಈತನೊಂದಿಗಿದ್ದ ಮತ್ತೊಬ್ಬ ಆರೋಪಿ ನಾರಾಯಣ ಲಮಾಣಿ ಈಗಾಗಲೇ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
  ಇವರು ಕಳೆದ ಜನೇವರಿ 24ರಂದು ಚನ್ನಳ್ಳಿ-ವರಹ ರಸ್ತೆ ಮಧ್ಯೆದಲ್ಲಿ ಬೈಕ್ ಮೇಲೆ ಹೊರಟಿದ್ದ ದಂಪತಿಯನ್ನು ತಡೆದು ಪತ್ನಿಯ ಕೊರಳಲಿದ್ದ 11 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
  ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಹಿರೇಕೆರೂರ ಸಿಪಿಐ ಬಸವರಾಜ ಹಾಗೂ ಸಿಬ್ಬಂದಿ, ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts