ಹಿರೇಬಾಗೇವಾಡಿ: ಟ್ಯಾಕ್ಸಿ ಮಾಲೀಕರಿಂದ ಬುತ್ತಿ ಸೇವೆ

ಹಿರೇಬಾಗೇವಾಡಿ: ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕೆಂದು ಇಲ್ಲಿಯ ಟ್ಯಾಕ್ಸಿ ಮಾಲೀಕರಾದ ರಾಜು ಕಪರಿ ಎಂಬುವರು ತಮ್ಮ ಜನ್ಮ ದಿನವಾದ ಏ.1ರಂದು ಶ್ರೀ ಪಡಿಬಸವೇಶ್ವರ ದೇವಸ್ಥಾನದಲ್ಲಿ ಬುತ್ತಿ ಸೇವೆ ನೆರವೇರಿಸಿದ್ದಾರೆ. ಶ್ರೀ ಪಡಿಬಸವೇಶ್ವರ ಮೂರ್ತಿಗೆ ಸಂಪೂರ್ಣವಾಗಿ ಬುತ್ತಿಯನ್ನು ಲೇಪಿಸಿದ ಬಳಿಕ ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಸೇವೆಯಲ್ಲಿ ವಿವಿಧ ಟ್ಯಾಕ್ಸಿ ಮಾಲೀಕರ ಗೆಳೆಯರ ಬಳಗ ಕೈ ಜೋಡಿಸಿದೆ.