ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ಹಿರೇಬಾಗೇವಾಡಿ: ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದ್ದು, ಆಸಕ್ತರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಇಲ್ಲಿಯ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಸುರೇಶ ಇಟಗಿ ಹೇಳಿದ್ದಾರೆ.

ಇಲ್ಲಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಆಚರಣೆ ನಿಮಿತ್ತ ಶನಿವಾರ ಸಂಜೆ ಕರೆಯಲಾಗಿದ್ದ ಪರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪಡಿಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಈರಣ್ಣ ರೊಟ್ಟಿ ಮಾತನಾಡಿ, ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗಾಗಿ ಶ್ರಮಿಸಿದ ಎಲ್ಲ ಮಹನೀಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಗೌರವಿಸಬೇಕು ಎಂದರು. ಬಳಿಕ ಬಸವ ಜಯಂತಿಯಂದು ಬೆಳಗ್ಗೆ ಷಟ್‌ಸ್ಥಲ ಧ್ವಜಾರೋಹಣ, ಪ್ರಸಾದ ವಿತರಣೆ, ವಿವಿಧ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ, ನಾಟಕ ಪ್ರದರ್ಶನ ಹಾಗೂ ಕಾರ್ಯಕ್ರಮಗಳಿಗೆ ತಗುಲುವ ಖರ್ಚು-ವೆಚ್ಚಗಳ ಬಗ್ಗೆ ಮತ್ತು ಗ್ರಾಮದಲ್ಲಿ ಸಂಗ್ರಹಿಸಬೇಕಾಗುವ ವಂತಿಗೆ ಬಗ್ಗೆ ಚರ್ಚಿಸಲಾಯಿತು.

ಈರಣ್ಣ ರೊಟ್ಟಿ, ಬಿ.ಜಿ.ವಾಲಿಇಟಗಿ, ಕಲ್ಲಯ್ಯ ಉದೇಶಿಮಠ, ಅಡಿವೇಶ ಇಟಗಿ, ಉಳವಪ್ಪ ರೊಟ್ಟಿ, ಜಾಲಿಕೊಪ್ಪ, ಶ್ರೀಕಾಂತ ಮಾದುಭರಮಣ್ಣವರ, ರಾಜಶೇಖರ ಪಾಟೀಲ, ಶಿವನಪ್ಪ ನಾಯ್ಕರ, ಅಜ್ಜಪ್ಪ ವಾಲಿಇಟಗಿ, ಮಂಜುನಾಥ ಧರೆಣ್ಣವರ, ನಿಂಗನಗೌಡ ನಾಯ್ಕರ, ಮಹಾಂತೇಶ ಘೋಡಗೇರಿ, ರಾಜಶೇಖರ ಸಾಲಿಮನಿ, ಬಸನಗೌಡ ಹಾದಿಮನಿ, ರಮೇಶ ವಾಲಿ, ಉಮೇಶ ನಂದಿ, ಶಿವನಗೌಡ ಹಾದಿಮನಿ, ಶಿವಾನಂದ ಹಿತ್ತಲಮನಿ, ಬಸವರಾಜ ಹಂಚಿನಮನಿ, ಚಂದ್ರು ಶಿಂತ್ರಿ, ನಾಗಪ್ಪ ನಂದಿ, ರುದ್ರಗೌಡ ಪಾಟೀಲ ಹಾಗೂ ವಿವಿಧ ಗ್ರಾಮಸ್ಥರು ಇದ್ದರು.