ಹವಾಮಾನ ವೈಪರೀತ್ಯ ಕಾರಣ? | ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಪರದಾಟ
ಜಿ.ನಾಗರಾಜ್ ಬಂಗಾರಪೇಟೆ
ಹವಾಮಾನದ ವೈಪರೀತ್ಯದಿಂದ ಜನರಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 365ಕ್ಕೂ ಹೆಚ್ಚಿನ ಡೆಂಘೆ ಪ್ರಕರಣ ದಾಖಲಾಗಿದ್ದು, ಸದ್ಯ ಸುಮಾರು 15 ಸಕ್ರಿಯ ಪ್ರಕರಣಗಳಿವೆ. ಈ ಮಧ್ಯೆ ಕೆಲ ದಿನಗಳಿಂದ ಶೀತಗಾಳಿ, ಬಿಸಿಗಾಳಿ ಸೇರಿ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಇದರಿಂದ ಬಂಗಾರಪೇಟೆ ತಾಲೂಕಿನ ಮನೆಮನೆಯಲ್ಲೂ ಒಂದಿಬ್ಬರು ವೈರಲ್ ಫೀವರ್, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳು ಹಾಗೂ ವಯಸ್ಕರು ಬಹುಬೇಗ ವೈರಾಣು ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಈ ಸಾಂಕ್ರಾಮಿಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಗೆ ಬರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಆರೋಗ್ಯವಾಗಿರಲೂ ಸಲಹೆ: ವೈರಲ್ ಫೀವರ್ ಒಬ್ಬರಿಂದ ಮತ್ತೊಬ್ಬರಿಗೆ ಬಹು ಬೇಗನೆ ಹರಡುವುದರಿಂದ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಜ್ವರ ಕಾಣಿಸಿಕೊಂಡರೆ ಅವರಿಗೆ ಚಿಕಿತ್ಸೆ ಕೊಡಿಸಬೇಕು. ಪ್ರತಿಯೊಬ್ಬರೂ ಕುದಿಸಿದ ಮತ್ತು ಬೆಚ್ಚನೆಯ ನೀರು ಮತ್ತು ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು. ಮನೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಮೆಸ್, ಪರೆದೆ ಸೇರಿ ಇತರ ವಸ್ತು ಬಳಸಬೇಕು. ಸಂಜೆ ವೇಳೆ ಬೆಚ್ಚನೆಯ ಬಟ್ಟೆ ಧರಿಸಬೇಕು. ವಾರಕ್ಕೆ ಎರಡು ದಿನ ಡ್ರಂನಲ್ಲಿನ ನೀರು ಚೆಲ್ಲಿ, ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಹಣ ವಸೂಲಿ: ಇನ್ನು ಕರೊನಾ ಸಮಯದಲ್ಲಿ ಕಂಡು ಬಂದಂತೆ ಜ್ವರದ ಜತೆಗೆ ಕೆಮ್ಮು, ಕಫ, ನೆಗಡಿ ಜೋರಾಗಿದೆ. ಅಂತೆಯೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಂದಣಿ ಹೆಚ್ಚಿರುವ ಕಾರಣ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳನ್ನೇ ನೆಚ್ಚಿಕೊಂಡಿದ್ದು, ಇದನ್ನೇ ನೆಪ ಮಾಡಿಕೊಂಡಿರುವ ಕೆಲ ಖಾಸಗಿ ವೈದ್ಯರು, ರಕ್ತ ಪರೀಾ ಲ್ಯಾಬ್ನ ಮಾಲೀಕರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಡೆಂ ಪರೀೆ, ಸಿಬಿಸಿ, ಆರ್ಬಿಸಿ ಸೇರಿ ಹಲವು ಪರೀೆಗೆ ಇಷ್ಟ ಬಂದಂತೆ ದರ ನಿಗದಿಪಡಿಸಿ ಹಣ ವಸೂಲಿಗೆ ಇಳಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜ್ವರ ಬಂದಿದೆ ಎಂದು ಖಾಸಗಿ ಕ್ಲಿನಿಕ್ಗಳಿಗೆ ಹೋದರೆ ಹಲವು ಬಗೆಯ ರಕ್ತಪರೀೆ ಮಾಡಿಸಿ ಎಂದು ವೈದ್ಯರು ಭಯ ಹುಟ್ಟಿಸುತ್ತಿದ್ದಾರೆ. ಡೆಂ ಇಲ್ಲದಿದ್ದರೂ ಪ್ರತಿ ದಿನ ಸಿಬಿಸಿ ಪರೀಕ್ಷೆ ಮಾಡಿಸಿ ಎಂದು ಹೇಳಿ ಹಣ ಸುಲಿಗೆ ಮಾಡುತ್ತಿದ್ದಾರೆ. ಮಾಡದೇ ಹೋದರೆ ಜೀವಕ್ಕೆ ಏನಾದರೂ ಸಮಸ್ಯೆ ಆಗುತ್ತದೆ ಎಂಬ ಭಯದಲ್ಲಿ ಸಾಲಸೂಲ ಮಾಡಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದೇವೆ. ಈ ಸಂಬಂಧ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.
| ಶಾಂತಮ್ಮ ಬಂಗಾರಪೇಟೆಜಿಲ್ಲೆಯಲ್ಲಿ ಡೆಂಘೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹೆಚ್ಚು ಗಮನ ಹರಿಸಿದ್ದು, ಜ್ವರ ನಿಯಂತ್ರಣಕ್ಕೆ ಬಂದಿದೆ. ಪ್ಲೇಟ್ಲೇಟ್ ತೀವ್ರವಾಗಿ ಇಳಿಮುಖವಾಗುವುದು ಸಹ ಕಡಿಮೆಯಾಗಿದೆ. ಸದ್ಯ ವೈರಲ್ ಫೀವರ್ ಪ್ರಕರಣ ಹೆಚ್ಚಾಗಿದ್ದು, ಕೆಮ್ಮು, ನೆಗಡಿಯಿಂದ ಹಲವರು ಬಳಲುತ್ತಿದ್ದಾರೆ. ಭಯಪಡುವ ಅವಗ್ಯವಿಲ್ಲ. ಎರಡ್ಮೂರು ದಿನ ಜ್ವರ ಕಡಿಮೆಯಾಗದೆ ಇದ್ದರೆ ಸರ್ಕಾರಿ ಆಸ್ಪೆತ್ರೆಯಲ್ಲಿ ರಕ್ತ ಪರೀೆ ಮಾಡಿಸಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕು.
| ಡಾ.ರವಿಕುಮಾರ್ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ