More

  ತಬ್ಲಿಘಿಗಳಿಂದ ಹಿಂದು ಯುವಕ ಮತಾಂತರ

  ಬೆಂಗಳೂರು: ಹಿಂದು ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರುವ ಮಹಾಜಾಲ ಕೋಲಾರ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ತಬ್ಲಿಘಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

  ಗುಜರಾತ್​ನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದ ಇವರು ಕರೊನಾ ಲಾಕ್​ಡೌನ್​ನಿಂದಾಗಿ ಅಲ್ಲೇ ಇದ್ದರು. ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಸೂರತ್‌ನಿಂದ ಮೇ 3ರಂದು ಕೋಲಾರ ಜಿಲ್ಲೆಗೆ ಬಂದ 44 ಜನರ ತಂಡವನ್ನು ಜಿಲ್ಲಾಡಳಿತ ಆರೋಗ್ಯ ತಪಾಸಣೆ ನಡೆಸಿ ಅವರ ಪೂರ್ವಾಪರ ಪರಿಶೀಲಿಸುವಾಗ ಮತಾಂತರ ಜಾಲ ಪತ್ತೆಯಾಗಿದೆ.

  ಇದನ್ನೂ ಓದಿರಿ ಹೆಚ್ಚುತ್ತಲೇ ಇದೆ ಕರೊನಾ ವೈರಸ್​ ಅಬ್ಬರ; 24 ಗಂಟೆಯಲ್ಲಿ ಸಾವನ್ನಪ್ಪಿದ್ದು 95 ಮಂದಿ, ಮಹಾರಾಷ್ಟ್ರದ್ದೇ ಮೇಲುಗೈ…

  ಗುಜರಾತ್​ನಿಂದ ಬಂದ ತಂಡದಲ್ಲಿ ಯುವಕ ಸಾದಿಕ್​ ಎಂಬಾತನ ದಾಖಲೆ ಪರಿಶೀಲಿಸುವಾಗ ಅವನ ಹೆಸರು ನಕಲಿ ಎಂಬುದು ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಸಿದಾಗ ಆತ ಹಿಂದು ಯುವಕ, ಹೆಸರು ಕಾರ್ತಿಕ್​ ಮುನಿಯೇಂದ್ರ. ತಮಿಳುನಾಡು ಮೂಲದವ. ಈತನನ್ನು ಮತಾಂತರ ಮಾಡಿ ಜತೆಯಲ್ಲೇ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗಿದೆ.

  ಇದನ್ನೂ ಓದಿರಿ ತಬ್ಲಿಘ್ ಸಂಪರ್ಕ ತಂದ ಕಂಟಕ: ತಹಸೀಲ್ದಾರ್, ಡಿಎಚ್‌ಒ ಸೇರಿ ಹಲವು ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್!

  ಸದ್ಯ ಇವರೆಲ್ಲರನ್ನೂ ಮಾಲೂರಿನ ರಾಜೇನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ ಮಾಡಲಾಗಿದೆ. ಅಲ್ಲದೆ ತಬ್ಲಿಘಿ ತಂಡದೊಂದಿಗೆ ಬಂದ ಮೊಹಮದ್​ ಹಮ್ಜಾ ಮತ್ತು ಸಮೀರ್​ ಉತ್ತರ ಪ್ರದೇಶ, ಸಯ್ಯದ್​ ರಿಜ್ವಾನ್​ ಬೆಂಗಳೂರಿನ ಪಾದರಾಯನಪುರದವರು. ಇವರನ್ನು ಕರೆತಂದ ಮಾಲೂರು ಪಟ್ಟಣದ ಕುಂಬಾರಪೇಟೆಯ ಸಯ್ಯದ್​ ಉಸ್ಮಾನ್ ಎಂಬಾತ ಇವರ ವಿಳಾಸವನ್ನು ಮರೆಮಾಚಿ ಮಾಲೂರು ನಿವಾಸಿಗಳೆಂದು ಕರೆತಂದಿದ್ದಾನೆ. ಈತನೊಂದಿಗೆ ಕಾರ್ತಿಕ್ ಮುನಿಯೇಂದ್ರ ಕೂಡ ಬಂದಿದ್ದ. ಸಯ್ಯದ್​ ಉಸ್ಮಾನ್ ವಿರುದ್ಧ ಮಾಲೂರು ತಹಸೀಲ್ದಾರ್​ ಮತಾಂತರ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

  See also  ರಾಜ್ಯದಲ್ಲಿ 6ಕ್ಕೆ ಏರಿತು ಕರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ: ಗದಗದಲ್ಲಿ ಮೊದಲ ಮರಣ ಪ್ರಕರಣ

  ಇದನ್ನೂ ಓದಿರಿ ತಬ್ಲಿಘಿಗಳಿಗೆ ದುರ್ಗಕ್ಕೆ ಪ್ರವೇಶ ತಪ್ಪು ನಡೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts