More

    ಹಿಂದು ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರು ಗುಂಡ್ಲುಪೇಟೆಯಲ್ಲಿ ಸೆರೆ

    ಚಾಮರಾಜನಗರ:‌‌ ಹಿಂದು ಸಂಘಟನೆಗಳ ಮುಖಂಡರ ಹತ್ಯೆ ಮಾಡಲು ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕರನ್ನು ಪೊಲೀಸರು ಗುಂಡ್ಲುಪೇಟೆ ಪಟ್ಟಣದಲ್ಲಿ ಶನಿವಾರ ಬಂಧಿಸಿದ್ದಾರೆ.

    ಗುಂಡ್ಲುಪೇಟೆ ಪಟ್ಟಣದ ಹೊಸೂರು ಬಡಾವಣೆಯ ಮೌಲ್ವಿ ಸದಾಖತ್ ಉಲ್ಲಾ (35) ಹಾಗೂ ಅಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಬಂಧಿತರು.
    ವಿಚಾರಣೆಗಾಗಿ ಇಬ್ಬರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.

    ಭಯೋತ್ಪಾದನಾ ನಿಗ್ರಹ ದಳ, ಆಂತರಿಕ ಭದ್ರತಾ ವಿಭಾಗ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಸೆರೆ ಹಿಡಿದಿದೆ.
    10 ದಿನಗಳಿಂದ ಆಶ್ರಯ: ಅಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾಗೆ ಮದರಸದ ಮೌಲ್ವಿ‌ ಸದಾಖತ್​ ಉಲ್ಲಾ ಆಶ್ರಯ ನೀಡಿದ್ದ. ಅಲ್​ ಉಮರ್​ ಸಂಘಟನೆ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

    ಇಬ್ಬರು ತಮಿಳುನಾಡು, ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಶಾಂತಿ ಕದಡಲು ಸಂಚು ರೂಪಿಸಿದ್ದರು ಎಂಬ ರಹಸ್ಯ ಮಾಹಿತಿ ಪತ್ತೆ ಹಚ್ಚಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಸುಳಿವು ಸಿಕ್ಕಿದ್ದು ಹೇಗೆ?: ತಮಿಳುನಾಡಿನಲ್ಲಿ ಹಿಂದು ಸಂಘಟನೆ ಕಾರ್ಯಕರ್ತ ಪಾಂಡಿ ಸುರೇಶ ಎಂಬಾತನ ಕೊಲೆ ಕೇಸಿನಲ್ಲಿ ಬಂಧಿತರಾಗಿದ್ದ ತಂಡದ ಸದಸ್ಯರು‌ ನೀಡಿದ ಸುಳಿವು ಆಧರಿಸಿ ಪೊಲೀಸರು ತನಿಖೆ ನಡೆಸಿದರು. ತನಿಖೆ ವೇಳೆ ಅಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಗುಂಡ್ಲುಪೇಟೆ ಪಟ್ಟಣದಲ್ಲಿ ಅಡಗಿರುವುದು ಪತ್ತೆಯಾಯಿತು ಎನ್ನಲಾಗಿದೆ.

    ಈತ ಹಲವು ದಿನಗಳಿಂದ ರಾಜ್ಯದ ಅನೇಕ ಕಡೆಗಳಲ್ಲಿ ಸುತ್ತಾಡಿದ್ದ. ಕೋಲಾರದಲ್ಲಿ‌ ಈತನ ಮೊಬೈಲ್ ಸಂಖ್ಯೆಯನ್ನು‌ ಪೊಲೀಸರು ಪತ್ತೆ ಮಾಡಿದ್ದರು. ಕಳೆದ 10‌ದಿನಗಳ ಹಿಂದೆ ಗುಂಡ್ಲುಪೇಟೆ ಪಟ್ಟಣಕ್ಕೆ ತೆರಳಿ ಅಲ್ಲಿ ಭೂಗತನಾಗಿ ಸಂಚು ರೂಪಿಸುತ್ತಿದ್ದ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts