ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಕೇರಳಕ್ಕೆ ಗೋವು ಸಾಗಣೆ ತಡೆದದ್ದಕ್ಕೆ ಕೊಂದು ಕುಣಿಕೆಗೇರಿಸಿರುವ ಶಂಕೆ

ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಶನಿವಾರ ರಾತ್ರಿ ಪತ್ತೆಯಾಗಿದೆ.

ಗೋಕಾಕ್​ ತಾಲೂಕಿನ ಅಡಿವೆಪ್ಪನ ಅಂಕಲಗಿ ಗ್ರಾಮದ ಶಿವಕುಮಾರ್​ ಬಲರಾಮ್​ ಉಪ್ಪಾರ (19) ಮೃತ ಯುವಕ. ಹಿಂದೂ ಪರ ಸಂಘಟನೆಗಳೊಂದಿಗೆ ಶಿವಕುಮಾರ್ ಗುರುತಿಸಿಕೊಂಡಿದ್ದ. ಕೆಲದಿನಗಳ ಹಿಂದೆ ಗೋಕಾಕ್​ನಿಂದ ಕೇರಳಕ್ಕೆ ಗೋವುಗಳನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಗಮನಿಸಿ, ಅದನ್ನು ತಡೆಯಲು ಯತ್ನಿಸಿದ್ದ. ಇದರಿಂದ ಕುಪಿತರಾಗಿದ್ದ ಗೋವು ಸಾಗಾಣಿಕೆದಾರರು ಈತನನ್ನು ಕೊಂದು, ಕುಣಿಕೆಗೇರಿಸಿ, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈತನನ್ನು ಕೊಲೆ ಮಾಡಿರುವ ಬಗ್ಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *