More

  ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ಗುಡ್ಡ ಕುಸಿತ

  ಸಿದ್ದಾಪುರ: ಘಟ್ಟದ ಕೆಳಗೆ ಹಾಗೂ ಘಟ್ಟದ ಮೇಲಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯ ಬಿಳಗಿ ಸಮೀಪ ಭಾನುವಾರ ತಡರಾತ್ರಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತ ಗೊಂಡಿತ್ತು.

  ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಸೋಮವಾರ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಸುಮಾರು ಆರೇಳು ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು.

  ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯ ಹಲವೆಡೆ ಮರ ಬೀಳುವುದು ಹಾಗೂ ಗುಡ್ಡ ಕುಸಿಯುವ ಭೀತಿ ಇರುವುದರಿಂದ ವಾಹನ ಸವಾರರು ಎಚ್ಚರದಿಂದ ಸಂಚಾರ ಮಾಡಬೇಕಾಗಿದೆ.

  ಸಿದ್ದಾಪುರದಲ್ಲಿ ಈ ವರ್ಷ ದಾಖಲೆ ಮಳೆ ಎನ್ನುವಂತೆ ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗಿನವರೆಗೆ 202.4ಮಿಮೀ ಮಳೆ ಬಿದ್ದಿದ್ದು ಇಲ್ಲಿಯವರೆಗೆ 140.22 ಸೆಂಮೀ ಮಳೆ ಬಿದ್ದಂತಾಗಿದೆ. ಇದು ಪಟ್ಟಣದಲ್ಲಿ ದಾಖಲಾಗಿದ್ದು, ಗ್ರಾಮೀಣ ಪ್ರದೇಶಗಳಾದ ನಿಲ್ಕುಂದ, ದೊಡ್ಮನೆ, ಮಾವಿನಗುಂಡಿ ಮತ್ತಿತರೆಡೆ ಇದಕ್ಕೂ ಹೆಚ್ಚು ಮಳೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts