More

    ‘ನಳಪಾಕ’ ಇಳಿಸಿದ ನರ್ಸಿಂಗ್ ವಿದ್ಯಾರ್ಥಿಗಳು, ಬಾಯಿಚಪ್ಪರಿಸಿದ ಸಾರ್ವಜನಿಕರು

    ಚಿಕ್ಕಮಗಳೂರು: ರಾಸಾಯನಿಕ ಬಳಕೆ ಇಲ್ಲದೆ ಸ್ಥಳೀಯವಾಗಿ ದೊರಕುವ ಪದಾರ್ಥಗಳನ್ನು ಬಳಸಿ ಪೌಷ್ಟಿಕ ಆಹಾರ ತಯಾರು ಮಾಡುವ ಬಗ್ಗೆ ಜಿಲ್ಲಾಸ್ಪತ್ರೆ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.

    ಶಾಂತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನರ್ಸಿಂಗ್ ವಿದ್ಯಾರ್ಥಿಗಳೇ ಪೌಷ್ಟಿಕ ಆಹಾರ ತಯಾರಿಸಿ ಪ್ರದರ್ಶಿಸಿದರು. ಅಡುಗೆಗೆ ಬಳಸುವ ಸಾಮಾನ್ಯ ವಸ್ತುಗಳಿಂದ ತಯಾರಿಸಿದ ಹೊಸ ಬಗೆಯ ತಿನಿಸುಗಳ ರುಚಿ ನೋಡಿ ಸಾರ್ವಜನಿಕರು ಬಾಯಿ ಚಪ್ಪರಿಸಿದರು.

    ನುಗ್ಗೆಸೊಪ್ಪಿನ ಬರ್ಫಿ, ಬಾಳೆಹಣ್ಣಿನ ಹಲ್ವಾ, ಗೋಧಿಹಿಟ್ಟಿನ ಬರ್ಫಿ, ಆಲೂಗಡ್ಡೆ ಪರೋಟ, ಬೀಟ್​ರೂಟ್ ಹಲ್ವಾ, ಅಗಸೆಸೊಪ್ಪಿನ ಪತ್ರೊಡೆ, ಶೇಂಗಾ ಬೀಜದಿಂದ ತಯಾರಿಸಿದ ಹಾಲು, ಮೂಲಂಗಿ ರಾಯಿತ, ಹೆಸರುಬೇಳೆ ಜ್ಯೂಸ್, ಹೆಸರುಕಾಳಿನ ಉಂಡೆ, ಬೀಟ್​ರೂಟ್ ಚಪಾತಿ ಹಲವು ಆಹಾರ ಪದಾರ್ಥಗಳು ನೋಡುಗರ ಬಾಯಲ್ಲಿ ನೀರೂರಿಸಿದವು.

    ಇದೇ ವೇಳೆ ಸಾರ್ವಜನಿಕರಿಗೆ ರಾಸಾಯನಿಕ ಪದಾರ್ಥಗಳಿಂದ ಆಗುವ ಹಾನಿ ಬಗ್ಗೆ ವಿವರಿಸಿದರು. ಪೌಷ್ಟಿಕ ಆಹಾರ ತಯಾರಿಸುವ ವಿಧಾನ ಮತ್ತು ಪೌಷ್ಟಿಕ ಆಹಾರದಿಂದ ಆಗುವ ಲಾಭಗಳ ಕುರಿತು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಿಳಿಹೇಳಿದರು.

    ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಚಾರ್ಯು ಸುಕುಮಾರಿ ಮಾತನಾಡಿದರು. ಸಾರ್ವಜನಿಕರು, ಬಾಣಂತಿಯರು, ಗರ್ಭಿಣಿಯರು, ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳು ಆಹಾರ ಪದಾರ್ಥ ಸವಿದು, ತಯಾರಿಸುವ ವಿಧಾನದ ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts