More

    ಮಳೆಗಾಲಕ್ಕೆ ಸಜ್ಜಾಗದ ಹೆದ್ದಾರಿ, ಉಡುಪಿಯಲ್ಲಿ ವಾಹನ ಸವಾರರಲ್ಲಿ ಆತಂಕ

    ಉಡುಪಿ: ಮಳೆಗಾಲಕ್ಕೆ ಜಿಲ್ಲೆಯ ರಸ್ತೆ, ಚರಂಡಿಗಳು ಇನ್ನೂ ಸಜ್ಜಾಗಿಲ್ಲ. ಅಪೂರ್ಣ ಕಾಮಗಾರಿ, ಗುಂಡಿಗಳು, ಹಳಾದ ರಸ್ತೆಗಳ ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದು ವಾಹನ ಸವಾರರಿಗೂ ಕಂಟಕವಾಗಿ ಪರಿಣಮಿಸುತ್ತಿದೆ.

    ಹೆಜಮಾಡಿ-ಶಿರೂರು (ಎನ್‌ಎಚ್66) ಗಡಿವರೆಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮಲ್ಪೆಯಿಂದ ತೀರ್ಥಹಳ್ಳಿ(169-ಎ)ನಡುವಿನ ಕೆಲವೆಡೆ ಕಾಮಗಾರಿ ಅಪೂರ್ಣವಾಗಿದೆ. ಚರಂಡಿ ಕೆಲಸಗಳು ವ್ಯವಸ್ಥಿತವಾಗಿ ನಡೆದಿಲ್ಲ. ಮಣಿಪಾಲದಲ್ಲಿ ಇದೀನ ರಸ್ತೆ ಬದಿ ಇಂಟರ್‌ಲಾಕ್ ಜೋಡಿಸುವ ಕೆಲಸ ಮಾಡಲಾಗುತ್ತಿದೆ.

    ಬ್ರಹ್ಮಾವರದಿಂದ ಬಾರ್ಕೂರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕೆಲಸ ನಡೆದಿದ್ದು, 100-200 ಮೀಟರ್ ಅಂತರ ಕಾಮಗಾರಿ ಬಾಕಿ ಉಳಿದಿದೆ. ಮಲ್ಪೆ, ಆದಿ ಉಡುಪಿ, ಕರಾವಳಿ ಜಂಕ್ಷನ್, ಸಂತೆಕಟ್ಟೆ ಸೇತುವೆ, ಬ್ರಹ್ಮಾವರ ಸೇರಿದಂತೆ ಕೆಲವಡೆ ಮಳೆ ನೀರು ಹರಿದು ಹೋಗುವ ಜಾಗದಲ್ಲಿ ಕಸ ಕಡ್ಡಿ ನಿಂತು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರ, ಪುರಸಭೆ ವ್ಯಾಪ್ತಿ ರಸ್ತೆಗಳಲ್ಲಿ ಮತ್ತು ಹೆದ್ದಾರಿ ಬದಿಯ ಚರಂಡಿಗಳನ್ನು ಸ್ವಚ್ಛತೆಗೊಳಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿಲ್ಲ. ಕೋವಿಡ್-19 ಒತ್ತಡದ ನಡುವೆ ಈ ಕೆಲಸಗಳನ್ನು ನಿರ್ವಹಿಸಲು ಸಮಸ್ಯೆಯಾಗಿರುವುದು ಹೌದು ಎನ್ನುತ್ತಾರೆ ಅಧಿಕಾರಿ ವರ್ಗ.

    ಜಿಲ್ಲೆಯಲ್ಲಿ ಹಾದುಹೋಗುವ ರಾಹೆ 66 ಮತ್ತು 169ಎ-ನಲ್ಲಿ ಮಳೆಗಾಲ ಸಂದರ್ಭ ಅಪಘಾತಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಮತ್ತು ಚರಂಡಿ ಸ್ವಚ್ಛತೆ, ಮಳೆ ನೀರಿ ಸರಾಗವಾಗಿ ಹರಿಯುವಂತೆ ಕ್ರಮ ವಹಿಸುವಂತೆ ರಾಹೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
    -ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts