ಹೈಟೆಕ್ ಬೇಸಾಯ ಅನುಸರಿಸಿ

ಬಾಗಲಕೋಟೆ: 2020 ರೊಳಗಾಗಿ ಕೃಷಿ ಆದಾಯ ದ್ವಿಗುಣಗೊಳಿಸಲು ಪ್ರತಿಯೊಬ್ಬ ಕೃಷಿಕ ಉನ್ನತ ತಂತ್ರಜ್ಞಾನ, ವೈಜ್ಞಾನಿಕ ತಾಂತ್ರಿಕತೆ ಗಳನ್ನೊಳಗೊಂಡ ನಿಖರ ಬೇಸಾಯ ಕ್ರಮ ಅನುಸರಿಸಬೇಕು ಎಂದು ತೋವಿವಿ ಕುಲಪತಿ ಡಾ.ಕೆ.ಎಂ. ಇಂದಿರೇಶ ಹೇಳಿದರು.

ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ಬುಧವಾರ ತೋವಿವಿ, ಕೃಷಿ ವಿವಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಹೈಟೆಕ್ ತೋಟಗಾರಿಕೆ ಹಾಗೂ ನಿಖರ ಬೇಸಾಯ ಬಲವರ್ಧನೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ತೋವಿವಿ ವಿಸ್ತರಣೆ ನಿರ್ದೇಶಕ ಡಾ.ವೈ.ಕೆ. ಕೋಟಿಕಲ್ಲ ಮಾತನಾಡಿ, 900 ಕೋಟಿ ಜನಸಂಖ್ಯೆ ಹೊಂದುತ್ತಿರುವ ಪ್ರಪಂಚಕ್ಕೆ ಆಹಾರ ಭದ್ರತೆ ಒದಗಿಸಲು ಭಾರತಕ್ಕೆ ವಿಪುಲ ಅವಕಾಶಗಳಿವೆ. ಈ ಬಗ್ಗೆ ನಾವೆಲ್ಲ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

ಧಾರವಾಡ ಕೃಷಿ ವಿವಿ ಉಪನಿರ್ದೇಶಕ ಡಾ.ಆರ್.ಎ. ಬೂದಿಹಾಳ, ಕಾರ್ಯಕ್ರಮದ ಸಂಯೋಜಕ ಡಾ.ಶಶಿಕುಮಾರ.ಎಸ್., ಡಾ. ವಿಜಯಮಹಾಂತೇಶ, ಡಾ.ಅಂಬರೀಶ, ಡಾ.ವಸೀಮ್ ಡಾ.ಶ್ರೀಪಾದ ವಿಶ್ವೇಶ್ವರ ಇತರರು ಇದ್ದರು.