Wednesday, 12th December 2018  

Vijayavani

Breaking News

ಹಳ್ಳಿ ಹಾಡು ಜನಪರ ಜಾಡು

Friday, 02.02.2018, 3:07 AM       No Comments

<< ದೇಶಾದ್ಯಂತ 8 ಕೋಟಿ ಮಹಿಳೆಯರಿಗೆ ಉಚಿತ ಎಲ್ಪಿಜಿ | 10 ಕೋಟಿ ಕುಟುಂಬಗಳಿಗೆ ಉಚಿತ ವಿಮೆ >>

<< 4 ಕೋಟಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ | ರೈತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ >>

ನವದೆಹಲಿ: ಬರಲಿರುವ ಸಾಲು ಸಾಲು ಚುನಾವಣೆಗಳ ಹಿನ್ನೆಲೆಯಲ್ಲಿ ಜನಪ್ರಿಯತೆಯೇ ಬಜೆಟ್ ಮಾನದಂಡವಾಗಬಹುದು ಎಂದು ನಂಬಿದ್ದವರು ಬೇಸ್ತು ಬಿದ್ದಿದ್ದಾರೆ. 2018-19ರ ಮುಂಗಡ ಪತ್ರದಲ್ಲಿ ಘೋಷಣೆ- ಆಶ್ವಾಸನೆಗಳ ಗಾಳಿಗೋಪುರ ಕಟ್ಟುವುದಕ್ಕಿಂತ ವಾಸ್ತವದ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ದೀಪ ಹಚ್ಚುವ ಜನಪರ ಕಾಳಜಿಯನ್ನು ಪ್ರಧಾನಿ ನರೇಂದ್ರ ಮೋದಿ- ವಿತ್ತ ಸಚಿವ ಅರುಣ್ ಜೇಟ್ಲಿ ಪ್ರದರ್ಶಿಸಿದ್ದಾರೆ. ಗ್ರಾಮೀಣ ಭಾಗಗಳಿಗೆ ನೆರವಿನ ಮಹಾಪೂರ ಹರಿಸಲಾಗಿದೆ. ಗುಜರಾತ್ ಚುನಾವಣೆಯಲ್ಲಿ ಗ್ರಾಮಾಂತರದಲ್ಲಿ ಬಿಜೆಪಿಗೆ ಬೆಂಬಲ ಪ್ರಮಾಣ ತಗ್ಗಿದ್ದರ ಫಲವೋ ಎಂಬಂತೆ ಈ ವರ್ಷ ಚುನಾವಣೆ ನಡೆಯಲಿರುವ, ಗ್ರಾಮೀಣ ಪ್ರದೇಶಗಳು ಸಾಕಷ್ಟಿರುವ ಮಧ್ಯಪ್ರದೇಶ, ಛತ್ತೀಸ್​ಗಢ ಹಾಗೂ ರಾಜಸ್ಥಾನಗಳಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿಯೂ ಮತಬುಟ್ಟಿ ತುಂಬಿಸಿಕೊಳ್ಳುವ ಉದ್ದೇಶ ಇದರ ಹಿಂದಿರುವುದು ಸ್ಪಷ್ಟ. ಬಿಜೆಪಿ ನಗರಕೇಂದ್ರಿತ ಪಕ್ಷ ಎಂಬ ಅಪವಾದದಿಂದ ಮುಕ್ತವಾಗುವ ಜಾಣನಡೆಯೂ ಇದರಲ್ಲಿದೆ. 8 ಕೋಟಿ ಮಹಿಳೆಯರಿಗೆ ಉಚಿತ ಎಲ್ಪಿಜಿ ಪೂರೈಕೆ, ನಾಲ್ಕು ಕೋಟಿ ಬಡ ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಘೋಷಣೆ ಹೊರಬಿದ್ದಿದೆ. ಅಮೆರಿಕದಲ್ಲಿನ ‘ಒಬಾಮಾ ಕೇರ್’ ಮಾದರಿಯಲ್ಲಿ ದೇಶದ 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ (ಪ್ರತಿ ಕುಟುಂಬಕ್ಕೆ -ಠಿ;5 ಲಕ್ಷ)ಆರೋಗ್ಯ ಸುರಕ್ಷತೆಗಾಗಿ ಹೊಸ ಯೋಜನೆ ಪ್ರಕಟಿಸಲಾಗಿದೆ. ರೈತರ ಸಾಲಗಳಿಗಾಗಿ -ಠಿ;11 ಲಕ್ಷ ಕೋಟಿ ಅನುದಾನ, ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ, ಬೆಳೆಗಳಿಗೆ ಮಾರುಕಟ್ಟೆ ದರಕ್ಕಿಂತ 1.5 ಪಟ್ಟು ಹೆಚ್ಚು ಕನಿಷ್ಠ ಬೆಂಬಲ ನಿಗದಿಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಮೂಲಸೌಕರ್ಯ ಯೋಜನೆಗಳಿಗೆ ಭಾರಿ ನೆರವು ದಕ್ಕಿದೆ. ಇನ್ನು, ಕರದಾತರ ವಿಚಾರಕ್ಕೆ ಬಂದರೆ, ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಾರ್ಪೆರೇಟ್ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿ ಕೊಡುಗೆ ದೊರೆತಿದೆ. ಹಾಗೆನೋಡಿದರೆ ಮಧ್ಯಮ ವರ್ಗಕ್ಕೆ ತುಸು ನಿರಾಸೆ ತಂದಿದೆ. ಆದರೆ ಹಿರಿಯ ನಾಗರಿಕರಿಗೆ ‘ನಮೋಸ್ಕಾರ’ ಸಂದಿದೆ. ರೈಲ್ವೆ ಅಭಿವೃದ್ಧಿಗೆ 1.48 ಲಕ್ಷ ಕೋಟಿ ರೂ. ಮೀಸಲಿಟ್ಟಿರುವ ಸರ್ಕಾರ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಿಸಿದೆ. ಒಟ್ಟಿನಲ್ಲಿ, ಈ ಸರ್ಕಾರದ ಕೊನೇ ಪೂರ್ಣ ಪ್ರಮಾಣದ ಈ ಬಜೆಟ್ ಗ್ರಾಮೀಣ ಮತ್ತು ಬಡವರ ಪರವಾಗಿರುವುದು ಸ್ಪಷ್ಟಗೋಚರ.

ಮೋದಿ ಹೆಲ್ತ್ ಕೇರ್

# ವಿಶ್ವದ ಬೃಹತ್ ಆರೋಗ್ಯ ರಕ್ಷಣಾ ವಿಮೆ ಯೋಜನೆ ಘೋಷಣೆ

# 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಸಿಗಲಿದೆ ಆರೋಗ್ಯ ಸುರಕ್ಷತೆ

# ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ವಿಮೆ

# 1.5 ಲಕ್ಷ ಕೇಂದ್ರಗಳಲ್ಲಿ ಉಚಿತ ಔಷಧ, ಹೆರಿಗೆ ಹಾಗೂ ಮಕ್ಕಳ ಚಿಕಿತ್ಸೆ ಸೇವೆಗೆ 1200 ಕೋಟಿ ರೂ. ಮೀಸಲು

# ಪೌಷ್ಟಿಕತೆ ಹೆಚ್ಚಿಸಿಕೊಳ್ಳಲು ಟಿಬಿ ರೋಗಿಗಳಿಗೆ ಪ್ರತಿ ತಿಂಗಳು 500 ರೂ.ನೀಡಿಕೆ

# 24 ಹೊಸ ಸರ್ಕಾರಿ ವೈದ್ಯ ಕಾಲೇಜು ಹಾಗೂ ಆಸ್ಪತ್ರೆಗಳ ನಿರ್ವಣ, ಜಿಲ್ಲಾಸ್ಪತ್ರೆಗಳು ಮೇಲ್ದರ್ಜೆಗೆ

# ವೈ ದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ 40 ಸಾವಿರ ರೂ.ಗೆ ಹೆಚ್ಚಳ.

ಮಹಿಳೆಯರಿಗೇನು?

# 8 ಕೋಟಿ ಬಡ ಮಹಿಳೆಯರಿಗೆ ಉಚಿತ ಎಲ್ಪಿಜಿ ಪೂರೈಕೆ

# ಮುಂದಿನ 3 ವರ್ಷ ಹೊಸ ಉದ್ಯೋಗಿಗಳ ಇಪಿಎಫ್ ಖಾತೆಗೆ ಶೇ.12ರ ವೇತನ ದೇಣಿಗೆ

# ಸ್ವಸಹಾಯ ಗುಂಪುಗಳ ಸಾಲ -ಠಿ;75 ಸಾವಿರ ಕೋಟಿಗೆ ಏರಿಕೆ

# 4ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ, ಹೆರಿಗೆ ರಜೆ 24ರಿಂದ 26 ವಾರಕ್ಕೆ ಹೆಚ್ಚಳ

ಕೃಷಿ ಖುಷಿ, ಗ್ರಾಮ ಸ್ವರಾಜ್ಯ

# ಕೃಷಿ ಮಾರುಕಟ್ಟೆಗಳ ಸ್ಥಾಪನೆಗಾಗಿ ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಧಿಯಡಿ 2 ಸಾವಿರ ಕೋಟಿ ರೂ.

# ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 14.34 ಲಕ್ಷ ರೂಪಾಯಿ ಮೀಸಲು

# ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕಾಗಿ ಗ್ರಾಮೀಣ ಕೃಷಿ ಮಾರುಕಟ್ಟೆಗಳ ಸ್ಥಾಪನೆ

# ಎಲ್ಲ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ ಉತ್ಪಾದನಾ ವೆಚ್ಚದ ಮೇಲೆ 1.5 ಪಟ್ಟು ಹೆಚ್ಚಳ

# ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಉತ್ಪನ್ನಗಳಿಗೆ ಸರ್ಕಾರದಿಂದಲೇ ಪೂರ್ಣ ಪಾವತಿ

# 42 ಮೆಗಾ ಫುಡ್​ಪಾರ್ಕ್ ಪ್ರಾರಂಭ

# ಕೃಷಿ ಚಟುವಟಿಕೆಗಳಿಗೆ ಸಾಲ ನೀಡುವ ಒಟ್ಟಾರೆ ಅನುದಾನ ಮೊತ್ತ 11 ಲಕ್ಷ ಕೋಟಿ ರೂ.ಗೆ ಹೆಚ್ಚಳ

# ಕೃಷಿ ಉತ್ಪನ್ನ ಕಂಪನಿಗಳಿಗೆ ಶೇ.100 ತೆರಿಗೆ ವಿನಾಯಿತಿ.

ಯಾವುದು ತುಟ್ಟಿ

# ಮೊಬೈಲ್, ಟಿವಿ, ಕಂಪ್ಯೂಟರ್

# ಎಸಿ ಹೋಟೆಲ್, ಕಾರು , ದ್ವಿಚಕ್ರ ವಾಹನ

# ತಂಬಾಕು ಉತ್ಪನ್ನ, ಪಾದರಕ್ಷೆ, ತರಕಾರಿ

# ಕೈ ಗಡಿಯಾರ, ಟ್ರಕ್-ಬಸ್ ಟೈರ್, ಹಣ್ಣಿನ ಜ್ಯೂಸ್

# ರೇಷ್ಮೆ ಬಟ್ಟೆ, ವಜ್ರ, ಸಿಗರೇಟು, ಕ್ಯಾಂಡಲ್, ಖಾದ್ಯ ತೈಲ

# ಬೆಳ್ಳಿ ನಾಣ್ಯ, ಸನ್​ಗ್ಲಾಸ್, ಶೇವಿಂಗ್ ಕಿಟ್, ರೇಷ್ಮೆ ಬಟ್ಟೆ

# ಡಿಯೋಡ್ರೆಂಟ್, ಕ್ರೀಡಾ ಸಾಮಗ್ರಿ, ಬೊಂಬೆ

# ಅಲ್ಯುಮಿನಿಯಂ ಅದಿರು, ಅಲಂಕಾರಿಕ ವಸ್ತು

ಯಾವುದು ಅಗ್ಗ

# ಕಚ್ಚಾ ಗೋಡಂಬಿ

# ಎಲ್​ಎನ್​ಜಿ

# ಆನ್​ಲೈನ್ ರೈಲ್ವೆ ಟಿಕೆಟ್ ಬುಕಿಂಗ್

# ಸೋಲಾರ್ ಟೆಂಪರ್ಡ್ ಗ್ಲಾಸ್

# ಚರ್ಮ ಉತ್ಪನ್ನ

# ರಕ್ಷಣಾ ಸೇವೆಗಳ ಗುಂಪು ವಿಮೆ

# ಪಿಒಎಸ್ ಮೆಷಿನ್ ಕಾರ್ಡ್

# ಆರೋಗ್ಯ ಸೇವೆ

ಹಿರಿಯರಿಗೆ ಕೊಡುಗೆ

# ಬ್ಯಾಂಕ್​, ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಮಿತಿ 10 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಹೆಚ್ಚಳ.

# ವೈದ್ಯಕೀಯ ವಿಮಾ ಪ್ರೀಮಿಯಂ ಅಡಿ 50 ಸಾವಿರ ರೂ.ವಿನಾಯಿತಿ ಪಡೆಯಬಹುದು.

# ವೈದ್ಯಕೀಯ ವೆಚ್ಚದ ಮೇಲಿನ ತೆರಿಗೆ ಮಿತಿ 1 ಲಕ್ಷ ರೂ.ಗೆ ಹೆಚ್ಚಳ.

ತೆರಿಗೆ

# ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಯಾವುದೇ ಬದಲಾವಣೆ ಇಲ್ಲ

# ವೈದ್ಯಕೀಯ ವೆಚ್ಚ, ಸಾರಿಗೆ ಭತ್ಯೆ 40 ಸಾವಿರ ರೂಪಾಯಿ ಸ್ಟಾ್ಯಂಡರ್ಡ್ ಡಿಡಕ್ಷನ್.

ತೈಲ ತೆರಿಗೆ ಇಳಿದ್ರೂ ಇಳಿಯದ ಬೆಲೆ!

ಪೆಟ್ರೋಲ್, ಡೀಸೆಲ್ ಮೇಲಿದ್ದ ಮೂಲ ಅಬಕಾರಿ ತೆರಿಗೆಯಲ್ಲಿ 2 ರೂ. ಹಾಗೂ 6 ರೂ. ಹೆಚ್ಚುವರಿ ಅಬಕಾರಿ ತೆರಿಗೆ ರದ್ದುಗೊಳಿಸ ಲಾಗಿದೆ. ಒಟ್ಟಾರೆ ಪ್ರತಿ ಲೀಟರ್ ಮೇಲೆ 8 ರೂ. ತೆರಿಗೆ ಇಳಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ಮೇಲೆ 8 ರೂ. ರೋಡ್ ಸೆಸ್ ವಿಧಿಸಿರುವುದರಿಂದ ಇಳಿದ ಬೆಲೆ ಅಷ್ಟೇ ವೇಗದಲ್ಲಿ ಮತ್ತೆ ಅದೇ ಮೊತ್ತಕ್ಕೆ ಸರಿಸಮನಾಗಿದೆ.

ಸಬ್​ಅರ್ಬನ್​ಗೆ ಸಮ್ಮತಿ

ರಾಜಧಾನಿಯ ಹಲವು ದಶಕಗಳ ಕನಸು ಕೊನೆಗೂ ನನಸಾಗಿದೆ. ಉಪನಗರ (ಸಬ್​ಅರ್ಬನ್)ರೈಲು ಯೋಜನೆಗೆ ಬಜೆಟ್​ನಲ್ಲಿ ಹಸಿರು ನಿಶಾನೆ ದೊರೆತಿದೆ. ಅಂದಾಜು 17 ಸಾವಿರ ಕೋಟಿ ರೂ.ವೆಚ್ಚದ 160 ಕಿ.ಮೀ ಉಪನಗರ ರೈಲು ಯೋಜನೆ ರೂಪಿಸುವ ವಿಚಾರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದರು. ಮೊದಲ ಹಂತದಲ್ಲಿ 160 ಕಿ.ಮೀ ಉಪನಗರ ಯೋಜನೆಗೆ ಚಾಲನೆ ಸಿಗಲಿದೆ. ಉಪನಗರ ರೈಲು ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಡೆಮು ರೈಲುಗಳನ್ನು ಮೆಮು ರೈಲಾಗಿ ಪರಿವರ್ತಿಸಲು 615 ಕೋಟಿ ರೂ., 2ನೇ ಹಂತದ ಕಾಮಗಾರಿಗೆ 1.812 ಕೋಟಿ, ಮತ್ತು 8,502 ಕೋಟಿ ರೂ.ವೆಚ್ಚದಲ್ಲಿ 3ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಹೊಂದಲಾಗಿದೆ.

ರೈಲ್ವೆಗೆ ಬಂಪರ್

1.48 ಲಕ್ಷ ಕೋಟಿ ರೂ. ಅನುದಾನ, ಎಲ್ಲ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ, ಸಿಸಿಟಿವಿ ಅಳವಡಿಕೆ.

2018-19ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ.7.2ರಿಂದ ಶೇ.7.5ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ.

| ಅರುಣ್ ಜೇಟ್ಲಿ ವಿತ್ತ ಸಚಿವ

# ಪ್ರತಿ ಐದು ವರ್ಷಗಳಿಗೊಮ್ಮೆ ಸಂಸದರ ವೇತನ ಪರಿಷ್ಕರಣೆಗೆ ಶೀಘ್ರ ಕಾನೂನು

# ವೇತನ ಪರಿಷ್ಕರಣೆ-ರಾಷ್ಟ್ರಪತಿ ಮಾಸಿಕ ಭತ್ಯೆ 5 ಲಕ್ಷ ರೂ., ಉಪರಾಷ್ಟ್ರಪತಿ ಭತ್ಯೆ 4 ಲಕ್ಷ ರೂ., ರಾಜ್ಯಪಾಲರ ಭತ್ಯೆ 3.5 ಲಕ್ಷ ರೂ.

# 2022ರ ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ

# ಎಪಿಎಂಸಿ ಉನ್ನತೀಕರಣಕ್ಕೆ 2 ಸಾವಿರ ಕೋಟಿ ರೂ.

# ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 3 ಲಕ್ಷ ಕೋಟಿ ಸಾಲ ನೀಡುವ ಗುರಿ

# ಬುಡಕಟ್ಟು ಜನರ ಶಿಕ್ಷಣಕ್ಕಾಗಿ ಏಕಲವ್ಯ ಶಾಲೆಗಳ ಆರಂಭ

# ಭಾರತ್ ಮಾಲಾ ಯೋಜನೆಯಡಿ 9 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ

# ಏರ್​ಪೋರ್ಟ್​ಗಳ ಸಾಮರ್ಥ್ಯ ಪ್ರತಿವರ್ಷ ನೂರು ಕೋಟಿ ಟ್ರಿಪ್​ಗೆ ಹೆಚ್ಚಿಸುವ ಗುರಿ.

ಶೈಕ್ಷಣಿಕ ಕ್ರಾಂತಿ

# ಹಳ್ಳಿ ಶಾಲೆಗಳಿಗಿನ್ನು ಡಿಜಿಟಲ್ ಬೋರ್ಡ್

# ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ಶಾಲೆ, ಮೂಲ ಸೌಕರ್ಯಕ್ಕೆ -ಠಿ;1 ಲಕ್ಷ ಕೋಟಿ

# ಸೆಸ್ ಶೇ.4ಕ್ಕೆ ಏರಿಕೆ, ಶಿಕ್ಷಕರ ತರಬೇತಿಗಾಗಿ ಸಮಗ್ರ ಬಿ.ಇಡಿ ಕೋರ್ಸ್

Leave a Reply

Your email address will not be published. Required fields are marked *

Back To Top