ಉನ್ನತ ಶಿಕ್ಷಣ ಜ್ಞಾನದ ಜತೆಗೆ ಉದ್ಯೋಗ ನೀಡಲಿ

ಬೆಂಗಳೂರು: ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಉದ್ಯೋಗ ಕಲ್ಪಿಸಬೇಕು. ಈ ನಿಟ್ಟಿಯಲ್ಲಿ ಪಠ್ಯಕ್ರಮ ರೂಪಿಸಿ ಬೋಧಿಸಬೇಕೆದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ರೇವಾ ವಿವಿಯಲ್ಲಿ ಫಿಟ್​ನೆಸ್ ಸೆಂಟರ್ ಮತ್ತು ಪಿ.ಜಿ. ಕೋರ್ಸ್​ಗಳನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕೇವಲ ಜ್ಞಾನ ನೀಡುತ್ತಿದೆಯೇ ಹೊರತು ಉದ್ಯೋಗ ಪಡೆಯುವ ಕೌಶಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಗಳು ಜ್ಞಾನದ ಜತೆಗೆ ಉದ್ಯೋಗವನ್ನು ಕಲ್ಪಿಸಿಕೊಡುವ ಶಿಕ್ಷಣ ನೀಡಬೇಕೆಂದರು. ಜಾಗತಿಕ ತಾಪಮಾನದ ಬಗ್ಗೆ ವಿವಿ ಅರಿವು ಮೂಡಿಸುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಹಲವು ಯೋಜನೆಗಳಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿವಿ ಕುಲಾಧಿಪತಿ ಡಾ.ಪಿ. ಶ್ಯಾಮರಾಜು ಹೇಳಿದರು. ಕುಲಪತಿ ಡಾ.ಎಸ್.ವೈ.ಕುಲಕರ್ಣಿ,ಕುಲಸಚಿವ ಧನಂಜಯ್ ಇದ್ದರು.

Leave a Reply

Your email address will not be published. Required fields are marked *