Lovely Professional University(LPU)ಯ ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಉನ್ನದ ಹುದ್ದೆಯ ಉದ್ಯೋಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ಗುಣಮಟ್ಟದ ಪಠ್ಯಕ್ರಮ ಹಾಗೂ ಸೂಕ್ತ ಮಾರ್ಗದರ್ಶನ ಕಾರಣದಿಂದ ಕ್ಯಾಂಪಸ್ ಆಯ್ಕೆ ಸಂದರ್ಭದಲ್ಲಿ ಸಹಕಾರಿಯಾಗುತ್ತಿದೆ ಎಂದು ಬಹುತೇಕ ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ನಡುವೆ ವಿದ್ಯಾರ್ಥಿ ಯಾಸಿರ್ ಎಂ. ಬರೋಬ್ಬರಿ 3 ಕೋಟಿ ರೂ. ವಾರ್ಷಿಕ ವೇತನ ಇರುವ ಉದ್ಯೋಗ ಪಡೆದುಕೊಂಡಿದ್ದು, ಐಟಿ ಕಂಪೆನಿಯಲ್ಲಿ AI/ML ಯೋಜನೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
LPUನಲ್ಲಿ ಪದವಿ ಪಡೆದ ಬಳಿಕ ಬೇರೆಡೆ ಇತರೆ ಕೋರ್ಸ್ಗಳನ್ನು ಮಾಡಿಲ್ಲ. ಅಧ್ಯಯನದ ವೇಳೆ ಈ ಕ್ಯಾಂಪಸ್ನಲ್ಲಿ ದೊರೆತ ಮಾರ್ಗದರ್ಶನ ಉತ್ತಮವಾಗಿತ್ತು. ಕಾಲೇಜು ಉತ್ತಮ ತರಬೇತಿ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ. ಹೀಗಾಗಿ ಕ್ಯಾಂಪಸ್ ಆಯ್ಕೆ ಸಂದರ್ಭದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು 3 ಕೋಟಿ ರೂ. ವಾರ್ಷಿಕ ವೇತನ ಉದ್ಯೋಗ ಪಡೆದುಕೊಂಡಿರುವ ವಿದ್ಯಾರ್ಥಿ ಯಾಸಿರ್ ಎಂ. ಹೇಳಿಕೊಂಡಿದ್ದಾರೆ.
ವಿಶ್ವವಿದ್ಯಾನಿಲಯವು ಆಯೋಜಿಸುವ ವಿವಿಧ ಪಠ್ಯೇತರ ಚಟುವಟಿಕೆಗಳು ಮತ್ತು ಸೆಮಿನಾರ್ಗಳು ಸಂವಹನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದೆ. ವ್ಯಾಸಾಂಗದ ಸಮಯದಲ್ಲಿ ಮಾರ್ಗದರ್ಶನ ಮಾಡುತ್ತಾ, ಬೆಂಬಲಿಸಿರುವುದರಿಂದ ಹೆಚ್ಚಿನ ಆತ್ಮವಿಶ್ವಾಸ ಮೂಡಲು ಕಾರಣವಾಯಿತು. ಹೀಗಾಗಿ ಉತ್ತಮ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾರಣವಾಗಿದೆ. ಇದಕ್ಕಾಗಿ ಕಾಲೇಜಿನ ಅಧ್ಯಾಪಕರು ಮತ್ತು ಪ್ಲೇಸ್‌ಮೆಂಟ್ ಸೆಲ್‌ಗೆ ಯಾಸಿರ್ ಎಂ. ಕೃತಜ್ಞತೆ ಸಲ್ಲಿಸಿದ್ದಾರೆ.
ಈಗಾಗಲೇ Lovely Professional University(LPU)ಯ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು Google, Apple, Microsoft, Mercedes ಸೇರಿದಂತೆ 500ಕ್ಕೂ ವಿವಿಧ ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಕೋಟಿ ರೂಪಾಯಿಗೂ ಹೆಚ್ಚಿನ ವಾರ್ಷಿಕ ವೇತನ ಇರುವ ಉದ್ಯೋಗ ಹೊಂದಿದ್ದಾರೆ. IIT/IIMs/NITಗಳಂತಹ ಪ್ರಮುಖ ಸಂಸ್ಥೆಗಳಿಂದ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳುವ ಅಂತಾರಾಷ್ಟ್ರೀಯ ಕಂಪೆನಿಗಳು ಎಲ್ಪಿಯು ವಿಶ್ವವಿದ್ಯಾಲಯದಿಂದ ಪ್ರಾರಂಭದಿಂದಲೂ 2000ಕ್ಕೂ ಸೂಕ್ತ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಂಡಿವೆ.
Lovely Professional University(LPU)ಯ ಬಿ.ಟೆಕ್. ಪದವೀಧರ ಹರೇಕೃಷ್ಣ ಮಹತೋ ವಾರ್ಷಿಕ 64 ಲಕ್ಷ ರೂ. ವೇತನದೊಂದಿಗೆ 2022ರಲ್ಲಿ Googleನ ಬೆಂಗಳೂರು ಕಛೇರಿಯನ್ನು ಸೇರಿಕೊಂಡಿದ್ದಾರೆ, ಕಳೆದ ಕೆಲವು ವರ್ಷಗಳಿಂದ 600ರಷ್ಟು ವಿದ್ಯಾರ್ಥಿಗಳು ವಾರ್ಷಿಕ 10-63 ಲಕ್ಷ ರೂ.ಗಳ ವೇತನ ಪಡೆದುಕೊಂಡಿದ್ದಾರೆ. Cognizant, Capgemini 1850ಕ್ಕೂ ವಿದ್ಯಾರ್ಥಿಗಳನ್ನು ಹಾಗೂ ವಿಪ್ರೋ 500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಗೆ ನೇಮಕಾತಿ ಮಾಡಿಕೊಂಡಿದೆ. ಅಲ್ಲದೆ MPhasis 230, Highradius 800ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಉನ್ನತ ಹಂತದ ಕಂಪೆನಿಗಳ ನೇಮಕಾತಿಯಿಂದ Lovely Professional University(LPU)ಯ ವಿದ್ಯಾರ್ಥಿಗಳಿಗೆ 20,000 ಕ್ಕೂ ಹೆಚ್ಚು ಉದ್ಯೋಗಗಳು ಹಾಗೂ ಇಂಟರ್ನ್‌ಶಿಪ್‌ಗಳನ್ನು ಪಡೆಯುವ ಅವಕಾಶ ಸಿಕ್ಕಂತಾಗಿದೆ.
ಪ್ರವೇಶ ಪರೀಕ್ಷೆ ಮತ್ತು ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಬಹುದು click here
Lovely Professional University(LPU)ಯು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗಕ್ಕೆ ಪೂರಕವಾದ ಪಠ್ಯಕ್ರಮವನ್ನು ಅಳವಡಿಸಕೊಂಡು ಬಂದಿರುವುದಕ್ಕೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಇದು ನಿರಂತರವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ಸರಿ ಹೊಂದುವಂತೆ ವಿದ್ಯಾರ್ಥಿಗಳಿಗೆ ತಯಾರಿ ಮಾಡಿಕೊಳ್ಳಲು ಸಹಕಾರಿಯಾಗುತ್ತಾ ಬಂದಿದೆ. ವಿಶ್ವವಿದ್ಯಾನಿಲಯವು Google, Microsoft, CompTIA, Transorg Analytics, IBM ನಂತಹ ವಿವಿಧ ಕಂಪೆನಿಗಳ ಪ್ರಮುಖರೊಂದಿಗೆ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಜತೆಗೆ 300ಕ್ಕೂ ಅಧಿಕ ಉನ್ನತ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡುವ ಅವಕಾಶ ಪಡೆಯಲು ಸಹಕಾರ ನೀಡುತ್ತಾ ಬಂದಿದೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪೂರಕವಾಗಿರುವ Lovely Professional University(LPU)ಯ 2023 ವರ್ಷದ ಪ್ರವೇಶ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಪ್ರವೇಶಾತಿಯು ಸ್ಪರ್ಧಾತ್ಮಕವಾಗಿದ್ದು, ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ LPUNEST2023 ಮತ್ತು ವೈಯಕ್ತಿಕ ಸಂದರ್ಶನದ ಆಧಾರಿತವಾಗಿ ನಡೆಯುತ್ತದೆ. ಪ್ರವೇಶ ಪರೀಕ್ಷೆ ಮತ್ತು ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಬಹುದು. students can click here.