26.8 C
Bangalore
Friday, December 13, 2019

ಸಾಂಬಾರ ರಾಣಿಗೆ ಗರಿಷ್ಠ ಧಾರಣೆ

Latest News

ಶಬರಿಮಲೆ ವಿಚಾರದಲ್ಲಿ ಸದ್ಯ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಪೊಲೀಸ್​ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ...

ತುಮಕೂರು ಸ್ಮಾರ್ಟ್‌ಸಿಟಿ ಜೆಎಂಡಿ ಎತ್ತಂಗಡಿ!

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಅವರನ್ನು ಎತ್ತಂಗಡಿ ಮಾಡಲಾಗಿದೆ. 3 ತಿಂಗಳ ಹಿಂದೇ ಸ್ಮಾರ್ಟ್‌ಸಿಟಿ ಎಂಡಿ ಜವಾಬ್ದಾರಿ ಹೊಣೆ ಹೊತ್ತಿದ್ದ ಮಹಾನಗರ...

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

ಉಮೇಶ್ ಎಚ್.ಎಸ್.ಮಂಗಳೂರು
ರೋಗಬಾಧೆ, ಧಾರಣೆ ಕುಸಿತ, ಕೋತಿ ಕಾಟದಿಂದ ನೆಲಕಚ್ಚಿದ್ದ ಏಲಕ್ಕಿ ಧಾರಣೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಸಾಂಬಾರ ರಾಣಿ ಮೊದಲ ದರ್ಜೆಯ ಏಲಕ್ಕಿ ಕೆ.ಜಿ.ಗೆ 2900 ರೂ.ದಾಟಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಗ್ವಾಟೆಮಾಲಾ ಪ್ರಪಂಚದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಏಲಕ್ಕಿ ಬೆಳೆಯುವ ದೇಶ. ಅಲ್ಲಿ ಪ್ರಾಕೃತಿಕ ವಿಕೋಪದಿಂದ ಉತ್ಪಾದನೆ ಕುಸಿದಿದೆ. ದೇಶೀಯವಾಗಿ ಕೇರಳದಲ್ಲಿ ಇಡುಕ್ಕಿ, ವಯನಾಡಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಏಲಕ್ಕಿ ಬೆಳೆಸಲಾಗುತ್ತದೆ. ಕಳೆದ ವರ್ಷದ ಪ್ರವಾಹದಿಂದಾಗಿ ಬೆಳೆ ನಾಶ, ಧಾರಣೆ ಏರಿಕೆಗೆ ಕಾರಣ.

ನೆರಳಿನ ಬೆಳೆ: ಏಲಕ್ಕಿ ನೆರಳನ್ನು ಬಹುವಾಗಿ ಬಯಸುವ ಬೆಳೆ. ಸಾಧಾರಣ ಇಳಿಜಾರು ಪ್ರದೇಶ ಏಲಕ್ಕಿಗೆ ಸೂಕ್ತ. 15ರಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಬೆಳೆ ಹುಲುಸಾಗಿರುತ್ತದೆ. ಉಷ್ಣತೆ ಹೆಚ್ಚಿದಂತೆ ಬೆಳೆ ನಾಶದ ಹಂತ ತಲುಪುತ್ತದೆ. ಹಿಂದೆ ಕಾಫಿ ತೋಟಗಳಲ್ಲಿ ಕಾಡು ಮರಗಳು ಯಥೇಚ್ಛವಾಗಿದ್ದವು. ಅದರ ನಡುವೆ ಏಲಕ್ಕಿ ಬೆಳೆಸಲಾಗುತ್ತಿತ್ತು. ಪ್ರಸ್ತುತ ಕಾಡುಮರಗಳನ್ನು ಕಡಿತಲೆ ಮಾಡಿ ಸಿಲ್ವರ್‌ನಂಥ ಏಕರೀತಿಯ ಮರಗಳನ್ನು ಬೆಳೆಸುತ್ತಿದ್ದು, ನೆರಳಿನ ಸಮತೋಲನ ಹದತಪ್ಪಿರುವುದು ಬೆಳೆ ಕಡಿಮೆಯಾಗಲು ಕಾರಣ ಎನ್ನುತ್ತಿದ್ದಾರೆ ಬೆಳೆಗಾರರು.

ಕಾಡುಪ್ರಾಣಿ ಹಾವಳಿಯಿಂದ ಕೈಗೆಟುಕದ ಏಲಕ್ಕಿ
ಕರ್ನಾಟಕದಲ್ಲಿ ಕಾಫಿಯಂತೆ, ಕೇರಳದಲ್ಲಿ ಏಲಕ್ಕಿ ತೋಟಗಳನ್ನು ನಿರ್ಮಿಸುತ್ತಾರೆ. ಆದರೆ, ಕರ್ನಾಟಕದಲ್ಲಿ ಮಿಶ್ರಬೆಳೆಯಾಗಿ ಅಡಕೆ, ಕಾಫಿ ತೋಟದ ನೆರಳಿನ ನಡುವೆ ಏಲಕ್ಕಿ ನಾಟಿ ಮಾಡುವುದು ವಾಡಿಕೆ. ಮಲೆನಾಡಿನ, ಕೊಡಗು, ಸಕಲೇಶಪುರ, ಮೂಡಿಗೆರೆ, ಕೊಪ್ಪ, ಶೃಂಗೇರಿ ಭಾಗಗಳಲ್ಲಿ ಈ ಹಿಂದೆ ಯಥೇಚ್ಛವಾಗಿ ಏಲಕ್ಕಿ ಬೆಳೆಯುತ್ತಿದ್ದರು. ಪ್ರಸ್ತುತ ಈ ಪ್ರಮಾಣ ಕುಸಿದಿದ್ದು, ಬಿಸಿಲೆ ಘಾಟ್ ಆಸುಪಾಸಿನ ತೋಟಗಳಲ್ಲಿ ಮಾತ್ರ ಏಲಕ್ಕಿ ಕೃಷಿ ಜೀವಂತವಾಗಿದೆ. ಏಲಕ್ಕಿಗೆ ಮಂಗಗಳ ಹಾವಳಿ ವಿಪರೀತವಾಗಿದೆ. ಏಲಕ್ಕಿ ಕಾಂಡದ ಸಿಹಿ ಹೀರುವ ಪ್ರಾಣಿಗಳು, ನಂತರ ಅವುಗಳನ್ನು ಪುಡಿಗಟ್ಟುತ್ತವೆ. ಅಳಿಲು ಏಲಕ್ಕಿ ಬೀಜ ತಿನ್ನುತ್ತವೆ. ಸೊರಗು ರೋಗಕ್ಕೆ ಹೆಕ್ಟೇರ್‌ಗಟ್ಟಲೇ ಕೃಷಿ ನಾಶವಾಗಿದೆ. ಏಲಕ್ಕಿಗೆ ಹಟ್ಟಿಗೊಬ್ಬರ ಬಳಕೆ ಅನಿವಾರ‌್ಯ, ಕಾಡುಹಂದಿ ಗೊಬ್ಬರದಲ್ಲಿರುವ ಹುಳುಹುಪ್ಪಟೆಗಳನ್ನು ತಿಂದು ಗಿಡ ನಾಶ ಮಾಡುತ್ತದೆ.

ಏಲಕ್ಕಿ ತಳಿಗಳು
ಕೇರಳದಲ್ಲಿ ನಲ್ಲಾನಿ ತಳಿ ವ್ಯಾಪಕವಾಗಿದೆ. ಕರ್ನಾಟಕದಲ್ಲಿ ಮೂಡಿಗೆರೆ ಕೃಷಿ ಸಂಶೋಧನಾ ಕೇಂದ್ರ ರೂಪಿಸಿದ ಮೂಡಿಗೆರೆ 1 ತಳಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದೆ. ಮಲೆನಾಡಿನ ತೋಟಗಳಲ್ಲಿ ಬೆಳೆಯುತ್ತಿದ್ದ ಕಾಡು ಏಲಕ್ಕಿಯನ್ನು ಮಾರ್ಪಾಡು ಮಾಡಿದ್ದಾರೆ. ಉಳಿದಂತೆ ಅಸ್ಸಾಂ ಕಪ್ಪು ಏಲಕ್ಕಿ ಪ್ರಸಿದ್ಧ. ಮೈಸೂರು ತಳಿ ಹೆಚ್ಚಿನ ಪ್ರದೇಶದಲ್ಲಿದೆ. ಸಕಲೇಶಪುರ ಏಲಕ್ಕಿ ಮಾರುಕಟ್ಟೆ ರಾಜ್ಯದಲ್ಲಿ ಅತಿ ದೊಡ್ಡದಾಗಿದ್ದು, ಇಲ್ಲಿ ದಿನನಿತ್ಯದ ಧಾರಣೆ ನಿಗದಿಯಾಗುತ್ತದೆ. ದೇಶದಿಂದ ಏಲಕ್ಕಿ ಹೆಚ್ಚಾಗಿ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತದೆ.

ಕೊಕ್ಕೆ ಕಂದು ಮತ್ತು ಕಟ್ಟೆ ವೈರಲ್ ಹಾವಳಿಯಿಂದ ಏಲಕ್ಕಿ ಕೃಷಿಗೆ ಸಮಸ್ಯೆಯಾಗಿದೆ. ರಾಜ್ಯದಲ್ಲಿ ವಾಣಿಜ್ಯ ಬೆಳೆಯಾಗಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆ. ಮಿಶ್ರ ಬೆಳೆಯಾದ ಕಾರಣ ಏಲಕ್ಕಿಗೆ ಆದ್ಯತೆ ಸಿಗುತ್ತಿಲ್ಲ. ಬೆಳೆ ನಿರ್ಲಕ್ಷೃಕ್ಕೊಳಗಾಗಿದೆ. 2012ರಿಂದ ನಿರಂತರ ಬೆಲೆ ಇಳಿಮುಖವಾಗಿರುವುದು ಕೃಷಿ ಹಿಮ್ಮುಖವಾಗಲು ಕಾರಣ. ಕಳೆದ ವರ್ಷದ ಭೀಕರ ಮಳೆಯಿಂದಾಗಿ ನಾಟಿ ಮಾಡಿದ ಗಿಡಗಳು ನೆಲಕಚ್ಚಿದ್ದು, ಪ್ರಸ್ತುತ ನಾಟಿಗೆ ಗಿಡಗಳೇ ಸಿಗದ ಸ್ಥಿತಿಯಿದೆ.
ಕುಮಾರ್, ಫೀಲ್ಡ್ ಆಫೀಸರ್, ಸಾಂಬಾರು ಮಂಡಳಿ ಕೊಪ್ಪ

ಕೇಂದ್ರೀಯ ಸಾಂಬಾರು ಮಂಡಳಿಯಿಂದ ಏಲಕ್ಕಿ ತೋಟ ನಿರ್ಮಾಣ, ನರ್ಸರಿಗೆ ಅನುದಾನ ಸಿಗುತ್ತಿದೆ. ಆದರೆ ಕಾಡುಪ್ರಾಣಿ ಹಾವಳಿ, ದರ ಏರಿಳಿತದಿಂದ ಏಲಕ್ಕಿ ಬೇಸಾಯ ಕಷ್ಟವಾಗಿದೆ. ಕಾಳುಮೆಣಸು, ಕಾಫಿ ಧಾರಣೆ ಇಳಿಕೆಯಿಂದ ಕೆಂಗೆಟ್ಟಿದ್ದ ಕೃಷಿಕರಿಗೆ ಏಲಕ್ಕಿ ಧಾರಣೆ ಏರಿಕೆ ಕೊಂಚ ಸಂತಸ ತಂದಿದೆ.
ಕಿರಣ್ ಹೊಸ್ಮನೆ, ಯುವ ಕೃಷಿಕ, ಕೊಪ್ಪ

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....