ಕೆಪಿಟಿಸಿಎಲ್​ಗೆ ಹೈಕೋರ್ಟ್​ ಬ್ರೇಕ್​

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಮತಿಘಟ್ಟದ ಕೈಮರದಲ್ಲಿ ನಿರ್ಮಿಸಿರುವ ವಿದ್ಯುತ್​ ಉಪಸ್ಥಾವರಕ್ಕೆ ಏಕಮಖ ಪ್ರಸರಣ ಮಾರ್ಗಕ್ಕೆ ಅಗತ್ಯವಾದ ಭೂಮಿಯನ್ನು ಯಾವುದೇ ಪರಿಹಾರ ನೀಡದೆ ವಶಪಡಿಸಿಕೊಂಡು ಟವರ್​ ನಿರ್ಮಿಸಿರುವ ಕೆಪಿಟಿಸಿಎಲ್​ಗೆ ಹೈಕೋರ್ಟ್​ ಆದೇಶ ಬ್ರೇಕ್​ ಹಾಕಿದೆ.


ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಂದನಕೆರೆ ಉಪಸ್ಥಾವರದಿಂದ ಮತಿಟ್ಟ ಸ್ಥಾವರಕ್ಕೆ ವಿದ್ಯುತ್​ ಮಾರ್ಗಕ್ಕೆ 7.7ಕಿಮೀ ಉದ್ದದ ಮಾರ್ಗಕ್ಕೆ ರೈತರ ಭೂಮಿಗೆ ಪರಿಹಾರ ನೀಡದೆ ಭೂಮಿ ಪಡೆಯಲಾಗಿದ್ದ ಬಗ್ಗೆ ರೈತರು ಮತ್ತು ಕೆಪಿಟಿಸಿಎಲ್​ ನಡುವೆ ಸಂರ್ಷಕ್ಕೆ ಕಾರಣವಾಗಿದೆ. ಹಂದನಕೆರೆ, ಹುಚ್ಚನಹಳ್ಳಿ, ಸೋರಲಮಾವು, ಬಂದ್ರೆಹಳ್ಳಿ, ಮತಿಟ್ಟ, ಮಲ್ಲಿಗೆರೆ ಮತ್ತಿತರ ಗ್ರಾಮಗಳ ನೂರಾರು ರೈತರ ಜಮೀನುಗಳಿಗೆ ನಯಾಪೈಸೆ ಪರಿಹಾರ ನೀಡದೆ ಈಗಾಗಲೇ 34 ಟವರ್​ಗಳನ್ನು ನಿರ್ಮಿಸಲಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಈ ಬಗ್ಗೆ ಸಂತ್ರಸ್ಥ ರೈತರು ಹೈಕೋರ್ಟ್​ ಮೆಟ್ಟಿಲೇರಿದ್ದು, ನ್ಯಾಯಾಧೀಶರಾದ ಕೆ.ಎಸ್​.ಹೇಮಲೇಖ ಅವರಿದ್ದ ಏಕಸದಸ್ಯ ಪೀಠ ಮುಂದಿನ ವಿಚಾರಣೆವೆರಗೂ ಯಾವುದೇ ಕಾಮಗಾರಿ ನಡೆಸದಂತೆ ಆದೇಶಿಸಿದೆ.


ಟವರ್​ ನಿರ್ಮಿಸಲು ಮತಿಟ್ಟ ಹಾಗೂ ಮಲ್ಲಿಗೆರೆಯ ರೈತರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ಮೆಟ್ಟಿಲೇರಿದ್ದರು ತೀರ್ಪು ಪ್ರಕಟವಾಗುವ ಮುನ್ನವೇ ಪೊಲೀಸ್​ ನಿಲ್ಲಿಸಿಕೊಂಡು ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತುಮಕೂರು ಜಿಲ್ಲಾಧಿಕಾರಿ ಸೂಚಿಸಿದ್ದರು.
ಕಾಮಗಾರಿ ಪೂರ್ಣಗೊಂಡರೂ ನಯಾಪೈಸೆ ಪರಿಹಾರ ನೀಡದ ಕೆಪಿಟಿಸಿಎಸ್​ ವಿರುದ್ಧ ಆಕ್ರೋಶಗೊಂಡಿರುವ ರೈತರು ನ್ಯಾಯಕ್ಕಾಗಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಕೈಗೆತ್ತಿಕೊಂಡಿರುವುದು ಭೂಮಿ, ಬೆಳೆ ಕಳೆದುಕೊಂಡ ರೈತರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.

 

ಪೊಲೀಸರ ಲಾಠಿ ತೋರಿಸಿ ರೈತರನ್ನು ಹೆದರಿಸಿ ಕಾಮಗಾರಿ ನಡೆಸಿರುವ ಕೆಪಿಟಿಸಿಎಲ್​ ವಿರುದ್ಧ ನ್ಯಾಯಾಲಯದ ಸಲ್ಲಿಸಿದ್ದ ಮನವಿ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ, ರೈತರ ಬೆಳೆ ಹಾಳು ಮಾಡದಂತೆ ಆದೇಶ ನೀಡಿರುವುದು ನೆಮ್ಮದಿ ಸಿಕ್ಕಿದೆ.
ಯೋಗೇಶ್​ ಸಂತ್ರಸ್ಥ, ಮತಿಘಟ್ಟ

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…