19.5 C
Bangalore
Wednesday, December 11, 2019

ಅಧಿಕ ರಕ್ತದೊತ್ತಡ ಬಾರದಿರಲು ಇಲ್ಲಿವೆ ಕೆಲ ಸಲಹೆಗಳು, ಮುಂಜಾಗ್ರತೆಗಳು

Latest News

ತಳೇವಾಡ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು: ಇಂದು ಮೃತ ದೇಹ ಪತ್ತೆ

ವಿಜಯಪುರ: ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ಸಂಭವಿಸಿದೆ. ಸುದೀಪ (10)...

ಗ್ರಾಹಕರಿಗೆ ಸಿಹಿ ಸುದ್ದಿ: ಹೊಸ ಬೆಳೆಯ ಆಗಮನದಿಂದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇತ್ತೀಚಿನ ವಾರಗಳಲ್ಲಿ ಗ್ರಾಹಕರಿಗೆ ಗಗನಕುಸುಮವಾಗಿದ್ದ ಈರುಳ್ಳಿ ಬೆಲೆಯು ಕೊಂಚ ಕೊಂಚವಾಗಿ ಇಳಿಯುವ ಲಕ್ಷಣಗಳು ಕಾಣುತ್ತಿವೆ. ರೈತರು ಹೊಸ ಬೆಳೆಯನ್ನು ಗುಜರಾತ್​ ಮತ್ತು...

ನ್ಯೂಜೆರ್ಸಿ ಕಿರಾಣಿ ಅಂಗಡಿಯಲ್ಲಿ ಶಂಕಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ : 6 ಮಂದಿ ಸಾವು

ನ್ಯೂಯಾರ್ಕ್: ನ್ಯೂಜೆರ್ಸಿ ನಗರದ ಜೆರ್ಸಿಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಅಡಗಿ ಕುಳಿತ​ ಶಂಕಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಇಬ್ಬರು...

ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಬುಲಾವ್​!

ಬೆಂಗಳೂರು: ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಮಂಡ್ಯದ ಕೆ.ಆರ್​.ಪೇಟೆ...

ಜೋಳದ ಬೆಲೆ ಏರಿಕೆ: ರೊಟ್ಟಿಯೂ ಈಗ ಬಲು ತುಟ್ಟಿ!

ಲಕ್ಷ್ಮೇಶ್ವರ: ರೊಟ್ಟಿ ತಿಂದವನೇ ಬಲು ಗಟ್ಟಿ ಎಂಬುದು ಉತ್ತರ ಕರ್ನಾಟಕದ ನಾಣ್ಣುಡಿ. ಆದರೆ, ಈಗ ರೊಟ್ಟಿಯೂ ತುಟ್ಟಿಯಾಗುತ್ತಿದೆ. ಜೋಳದ ಬೆಲೆ ದಿನೇದಿನೆ...

ನಮ್ಮ ಹವ್ಯಾಸ ಮತ್ತು ಜೀವನ ಶೈಲಿಯಿಂದ ರಕ್ತದೊತ್ತಡದ ಏರುಪೇರಾಗುತ್ತದೆ. ಇದು ಅನಾರೋಗ್ಯಕ್ಕೆ ಮತ್ತು ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ನಮಗೆ ತಿಳಿಯದಂತೆ ನಮ್ಮ ಹವ್ಯಾಸಗಳು ಅಧಿಕ ರಕ್ತದೊತ್ತಡಕ್ಕೆ (ಬಿಪಿ)ಗೆ ದಾರಿ ಮಾಡಿಕೊಡುತ್ತವೆ. ಇಂತಹ ಬಿಪಿಗೆ ಕಾರಣಗಳಾದ ನಮ್ಮ ಹವ್ಯಾಸಗಳಾವುವು? ಬನ್ನಿ ತಿಳಿಯೋಣ.

ಏನಿದು ಬಿಪಿ?: ಅಪಧಮನಿಗಳ ನಾಳದಲ್ಲಿ ರಕ್ತ ವಿರುದ್ಧ ರಕ್ತ ಚಲನೆಯೇ ರಕ್ತದೊತ್ತಡ. ಪ್ರತಿಕ್ಷಣವೂ ನಮ್ಮ ಹೃದಯ ರಕ್ತವನ್ನು ಪಂಪ್​ ಮಾಡುತ್ತಲೇ ಇರುತ್ತದೆ. ರಕ್ತದ ವೇಗವನ್ನು ಮಿಮೀ ಎಚ್​ಜಿ ಎಂದು ಅಲೆಯಲಾಗುತ್ತದೆ. ಹೃದಯದ ಬಡಿತ ಕೊಂಚ ತೀವ್ರಗೊಂಡಾಗ ರಕ್ತದ ವೇಗ ಹೆಚ್ಚುತ್ತದೆ. ಆಗ ವಯಸ್ಕರಲ್ಲಿ 140 ಎಂಎಂ ಎಚ್​ಜಿ ಅಥವಾ ಇದಕ್ಕೂ ಹೆಚ್ಚಿರುತ್ತದೆ. ಬಡಿತ ಕಡಿಮೆಯಾದಾಗ ರಕ್ತದ ವೇಗ ಕುಗ್ಗುತ್ತದೆ. ಆಗ ರಕ್ತದೊತ್ತಡ 90 ಎಂಎಂ ಎಚ್​ಜಿ ಇರುತ್ತದೆ. ಸಾಮಾನ್ಯವಾಗಿ ಸಾಧರಣ ಹೃದಯ ಬಡಿತದಲ್ಲಿ ಆರೋಗ್ಯಕರ ಮನುಷ್ಯನ ಬಿಪಿ 120/80 ಇರಬೇಕು. ಇದು ಕೊಂಚ ಏರಿಪೇರಾದರೂ ಹೃದಯಕ್ಕೆ ಒಳ್ಳೆಯದಲ್ಲ ಎನ್ನುವುದು ತಜ್ಞರ ವೈದ್ಯರ ಅಭಿಪ್ರಾಯ.

ಕಾರಣಗಳೇನು?: ಶೇ. 90 ರಿಂದ ಶೇ. 95 ಬಿಪಿ ಪ್ರಕರಣಗಳಲ್ಲಿ ಕಾರಣ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಉಳಿದ ಶೇ. 5ರಿಂದ 10 ಪ್ರಕರಣಗಳಲ್ಲಿ ಕೆಲ ಕಾರಣಗಳನ್ನು ಗುರುತಿಸಬಹುದು. ಇದು ಪ್ರಾಥಮಿಕ ಹಂತ. ಎರಡನೇಯ ಹಂತದಲ್ಲಿ ರಕ್ತದೊತ್ತಡಕ್ಕೆ ಕಿಡ್ನಿ ಸಂಬಂಧಿತ ಕಾಯಿಲೆಗಳು, ತಪ್ಪು ಔಷಧ ಸೇವನೆ, ನೋವು ನಿವಾರಕಗಳು ಮುಂತಾದವುಗಳು ಕಾರಣಗಳಾಗುತ್ತವೆ. ಮಾದಕದ್ರವ್ಯ ಕೂಡ ಹೈಬಿಪಿಗೆ ಕಾರಣವಾಗುತ್ತದೆ.

ಲಕ್ಷಣಗಳೇನು?: ಅಧಿಕ ರಕ್ತದೊತ್ತಡ ಇರುವ ಬಗ್ಗೆ ಬಹಳ ಜನಕ್ಕೆ ತಿಳಿದೇ ಇರುವುದಿಲ್ಲ. ಇದು ಅಪಾಯ ಮಟ್ಟ ತಲುಪಿದ್ದರೂ ಕೆಲವರಿಗೆ ಅದರ ಬಗ್ಗೆ ತಿಳಿದೇ ಇರುವುದಿಲ್ಲ. ಆದರೆ ಕೆಲವರಿಗೆ ಸಣ್ಣ ತಲೆ ನೋವಿನಿಂದ ಆರಂಭವಾಗುತ್ತದೆ. ಮೂಗಲ್ಲಿ ರಕ್ತಸ್ರಾವವಾಗುತ್ತದೆ. ಇದು ಪ್ರಾಥಮಿಕ ಲಕ್ಷಣಗಳು ಎನ್ನಬಹುದು.

ಮುಂಜಾಗ್ರತೆಗಳೇನು?: ಧೂಮಪಾನ ನಿಲ್ಲಿಸ, ದೇಹದ ತೂಕ ಸಮತೋಲದಲ್ಲಿರಲಿ. ತೂಕ ಹೆಚ್ಚಿದ್ದರೆ ಆರೋಗ್ಯಕರವಾಗಿ ಕಡಿಮೆಗೊಳಿಸಿಕೊಳ್ಳಿ. ಆಹಾರದಲ್ಲಿ ಉಪ್ಪು ಕಡಿಮೆ ಇರಲಿ. ಫೈಬರ್​ ಅಂಶಗಳಿರುವ ಹಣ್ಣು, ತರಕಾರಿ ಸೇವನೆ ಉತ್ತಮ. ಅತಿಯಾದ ಮದ್ಯಪಾನ, ಕಾಫಿ ಮತ್ತು ಕೊಬ್ಬಿನಾಂಶದ ಆಹಾರ ಪದಾರ್ಥಗಳು ಬೇಡ. ದೇಹಕ್ಕೆ ಕೊಂಚ ದಂಡನೆ ಇರಲಿ. ಜತೆಗೆ ನಿಮ್ಮ ವೈದ್ಯರು ಸೂಚಿಸುವ ಕ್ರಮವನ್ನು ಅನುಸರಿಸಲು ಮರೆಯದಿರಿ.

ಮನೆ ಮದ್ದು ಏನು?: ಜೀವನ ಶೈಲಿ ಬದಲಾವಣೆ ಎಲ್ಲದಕ್ಕೂ ದಾರಿ. ಕೆಲಸದ ನಂತರ ವಿರಾಮವಿರಲಿ, ದೇಹಕ್ಕೆ ಹೇಗೆ ವಿರಾಮ ಅಗತ್ಯವೋ ಹಾಗೆಯೇ ಮನಸ್ಸಿಗೂ ಕೊಂಚ ವಿರಾಮ ಅಗತ್ಯ. ನಿದ್ದೆ ಮಾಡುವ ಮುನ್ನ ಆಲೋಚನೆಗಳಿಗೆ ಕಡಿವಾಣ ಹಾಕಿ. ನಿಮ್ಮಿಷ್ಟದ ಹವ್ಯಾಸ ರೂಢಿಸಿಕೊಳ್ಳಿ, ಓದುವುದು, ಬರೆಯುವುದು…. ಹೀಗೆ. ಮೊಬೈಲ್​ ತೆಗೆದು (ಸಾಧ್ಯವಾದಷ್ಟು) ದೂರವಿಡಿ.

ಹೊಟ್ಟೆ ತುಂಬ ಆಹಾರ ಸೇವಿಸಿರಿ. ಹಣ್ಣು, ಹಸಿರು ತರಕಾರಿಗಳ ಬಳಕೆ ಹೆಚ್ಚಿರಲಿ. ಪ್ರತಿದಿನ ಕನಿಷ್ಠ 30 ನಿಮಿಷವಾದರೂ ದೇಹಕ್ಕೆ ಧಣಿಸಿ. ಮಧ್ಯಪಾನ. ಧೂಮಪಾನಕ್ಕೆ ಕಡಿವಾಣವಿರಲಿ. ಒತ್ತಡ ಎಲ್ಲರಿಗೂ ಇರುತ್ತದೆ ಅದನ್ನು ನಿಯಂತ್ರಣಕ್ಕೆ ತರುವುದು ನಿಮ್ಮ ಕೈಯಲ್ಲೇ ಇದೆ. ಹಿತವಾದ ನಿದ್ದೆ ಕೂಡ ನಿಮ್ಮ ಆರೋಗ್ಯಕ್ಕೆ ಸಹಕಾರಿ. (ಏಜೆನ್ಸಿಸ್​)

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...