ಮೈಸೂರು: ಜಾಗತಿಕ ಭೀತಿ ಸೃಷ್ಟಿಸಿರುವ ಕರೊನಾ ವೈರಸ್ ನೆರೆಯ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆಗೂ ಕಾಲಿಡುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೈಸೂರಿನಿಂದ ಕೇರಳ, ಗೋವಾಕ್ಕೆ ವಿಮಾನಗಳ ಸಂಚಾರ ಹಿನ್ನೆಲೆಯಲ್ಲಿ, ಕರೊನಾ ವೈರಸ್ ಬಗ್ಗೆ ವಿಮಾಣ ನಿಲ್ದಾಣದಲ್ಲಿ ಮುಂಜಾಗ್ರತೆ ಕ್ರಮ ವಹಿಸಲಾಗಿದ್ದು, ನಗರಕ್ಕೆ ಆಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ವಿಮಾನ ನಿಲ್ದಾಣದಲ್ಲೂ ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ.
ಅರಮನೆ ಹಾಗೂ ವಿಮಾನ ನಿಲ್ದಾಣದ ಎಲ್ಲ ಸಿಬ್ಬಂದಿ ಹಾಗೂ ಭದ್ರತಾ ಪೊಲೀಸರಿಗೆ ಮಾಸ್ಕ್‌ಗಳನ್ನು ವಿತರಿಸಲಾಗಿದ್ದು, ಸಿಬ್ಬಂದಿ ಹಾಗೂ ಪೊಲೀಸರು ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.