ಐಸಿಸ್ ದೆಹಲಿ ಆತ್ಮಾಹುತಿ ದಾಳಿ ಸಂಚು ವಿಫಲ

ನವದೆಹಲಿ: ರಾಷ್ಟ್ರ ರಾಜಧಾನಿಯ ವಿಮಾನ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ನಾಲ್ಕು ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿದಾಳಿಗೆ ಸಜ್ಜಾಗಿದ್ದ ಐಸಿಸ್ ಉಗ್ರರ ಸಂಚನ್ನು ಎನ್​ಐಎ ವಿಫಲಗೊಳಿಸಿದೆ. ಕಳೆದೊಂದು ವರ್ಷದಿಂದ ರಾಷ್ಟ್ರೀಯ ಭದ್ರತಾ ದಳ ಸೇರಿ ಇತರೆ ಗುಪ್ತಚರ ಸಂಸ್ಥೆಗಳ ನಿಗಾದಲ್ಲಿದ್ದ ಅಫ್ಘಾನಿಸ್ತಾನ ಮೂಲದ ಆತ್ಮಾಹುತಿ ಬಾಂಬರ್​ವೊಬ್ಬ ದೆಹಲಿಯ ಅಪಾರ್ಟ್​ವೆುಂಟ್​ವೊಂದರಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವ ಮೂಲಕ ಸಂಭಾವ್ಯ ಭಾರಿ ಅನಾಹುತ ತಪ್ಪಿದಂತಾಗಿದೆ.

2017ರಿಂದಲೇ ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಗುಪ್ತಚರ ಸಂಸ್ಥೆಗಳು ಕೊನೆಗೂ ಪ್ರತಿತಂತ್ರ ರೂಪಿಸಿ ಬಲೆಗೆ ಬೀಳಿಸಿವೆ. ಬಂಧಿತನ ಸಂಚು ತಿಳಿದುಕೊಳ್ಳುವ ಸಲುವಾಗಿ ಗುಪ್ತಚರ ಅಧಿಕಾರಿಗಳೇ ಸಹಾಯ ಮಾಡುವ ಸೋಗಿನಲ್ಲಿ ನಾಟಕವಾಡಿ ಎಲ್ಲ ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ. ಈತನಿಗೆ ದೆಹಲಿಯ ಲಜ್ಪತ್ ನಗರದಲ್ಲಿ ಮನೆಯೊಂದನ್ನು ಮಾಡಿಸಿಕೊಟ್ಟಿದ್ದ ಗುಪ್ತಚರ ದಳದ ಸದಸ್ಯರು. ವಿಧ್ವಂಸಕ ಕೃತ್ಯದ ಸಂಪೂರ್ಣ ಮಾಹಿತಿ ಪಡೆದ ಬಳಿಕ ಬಂಧಿಸಿದ್ದಾರೆ.

ಪಾಕ್​ನಲ್ಲಿ ತರಬೇತಿ

ಈ ಬಂಧಿತ ಉಗ್ರ ಸೇರಿ ಒಟ್ಟು 12 ಜನರಿಗೆ ಪಾಕಿಸ್ತಾನದಲ್ಲಿ ಬಾಂಬ್ ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗಿತ್ತು. ಇವರು ವಿಶ್ವದ ಬೇರೆ ಬೇರೆ ಭಾಗಗಳಿಗೆ ಹೋಗಿದ್ದಾರೆ. ಈ ಮಾಹಿತಿ ಆಧರಿಸಿ ಭಾರತೀಯ ಗುಪ್ತಚರ ಸಂಸ್ಥೆ ಅಫ್ಘಾನಿಸ್ತಾನ, ದುಬೈ ಹಾಗೂ ಭಾರತದಲ್ಲಿ ಉಗ್ರರ ಜಾಲದ ಮೇಲೆ ಕಣ್ಣಿಟ್ಟಿತ್ತು. ಏತನ್ಮಧ್ಯೆ ಇನ್ನೊಬ್ಬ ಐಸಿಸ್ ಉಗ್ರ ದೆಹಲಿಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರವೇಶ ಪಡೆದಿದ್ದ. ಆದರೆ ಈ ಉಗ್ರನ ಬಂಧನವಾಗುತ್ತಿದ್ದಂತೆ ಅಫ್ಘಾನಿಸ್ತಾನಕ್ಕೆ ಹೋಗಿದ್ದಾನೆ. ಅಲ್ಲಿ ಅಮೆರಿಕದ ಸೇನೆ ಭಾರತದ ಮಾಹಿತಿ ಆಧರಿಸಿ ಆತನನ್ನು ಕೂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. – ಪಿಟಿಐ

ಎಲ್ಲೆಲ್ಲಿ ಸ್ಕೆಚ್# ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

# ಅನ್ಸಾಲ್ ಪ್ಲಾಜಾ ಮಾಲ್

# ದಕ್ಷಿಣ ದೆಹಲಿಯ ಮಾರುಕಟ್ಟೆ

Leave a Reply

Your email address will not be published. Required fields are marked *