ಹಿರಿಯೂರು: ಇಲ್ಲಿನ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಧನುರ್ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ನಿತ್ಯ ಮುಂಜಾನೆ ಮತ್ತು ಸಂಜೆ ವಿಶೇಷ ಧಾರ್ಮಿಕ-ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
ಸಂಪನ್ನ ಹಾಗೂ ಶ್ರೀಹರಿ ವಾಸವಿ ಭಜನಾ ಮಂಡಳಿ ವತಿಯಿಂದ ಭಜನೆ, ಹೋಮ-ಹವನ, ಗಣಪತಿ ಪೂಜೆ, ಅನ್ನಸಂತರ್ಪಣೆ ಇತರ ಧಾರ್ಮಿಕ ಕಾರ್ಯಗಳು ನೆರವೇರಿದವು.
ಇದರ ಅಂಗವಾಗಿ ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಎಳ್ಳುಬೆಲ್ಲ ಪ್ರಸಾದ ವಿನಿಯೋಗ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಹಾಗೂ ಅರಿಸಿಣ, ಕುಂಕುಮ, ಬಳೆ ವಿತರಣೆ ಕಾರ್ಯಕ್ರಮ ನಡೆಯಿತು.
ನೂರಾರು ಭಕ್ತರು, ವಿಶ್ವಕರ್ಮ ಸಮಾಜದ ಮುಖಂಡರು, ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.