ಮುಂಬೈ: ಬಾಲಿವುಡ್ನ ಕ್ಯೂಟ್ ಕಪಲ್ ಆಗಿರುವ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ( Aishwarya Rai ) ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸುತ್ತಿಲ್ಲ ಇಬ್ಬರು ದೂರವಾಗಿದ್ದಾರೆ ಎನ್ನುವ ಟಾಕ್ವೊಂದು ಹಲವು ದಿನಗಳಿಂದ ಇದೆ. ಆದರೆ ಈ ಕುರಿತಾಗಿ ಐಶ್ ಹಾಗೂ ಅಭಿಷೇಕ್ ಕೂಡಾ ಎಂದು ಮಾತನಾಡಿಲ್ಲ. ಆದರೆ ಈ ಜೋಡಿ ಕುರಿತಾಗಿ ಇಂದು ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನವೆಂಬರ್ 1ಕ್ಕೆ ಐಶ್ವರ್ಯಾ ಅವರು ಹುಟ್ಟುಹಬ್ಬವಾಗಿತ್ತು. ಐಶ್ಗೆ ಅಮಿತಾಭ್ ಬಚ್ಚನ್ ಆಗಲಿ, ಅಭಿಷೇಕ್ ಬಚ್ಚನ್ ಆಗಲಿ ವಿಶ್ ಮಾಡಿಲ್ಲ. ಯಾಕೆ ವಿಶ್ ಮಾಡಿಲ್ಲ.. ಐಶ್ ಬಚ್ಚನ್ ಕುಟುಂಬದಿಂದ ದೂರವಾಗಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದರು. ಆದರೆ ಇದ್ರ ಹಿಂದಿನ ಕಾರಣವೇ ಬೇರೆ ಇದೆ ಎನ್ನುವುದು ಮೂಲಗಳಿಂದ ತಿಳಿದು ಬಂದಿದೆ.
ಹೌದು…ಐಶ್ವರ್ಯಾ ಇತ್ತೀಚೆಗೆ ತನ್ನ 51 ನೇ ಹುಟ್ಟುಹಬ್ಬವನ್ನು ತನ್ನ ಪತಿ ಅಭಿಷೇಕ್ ಇಲ್ಲದೆ ದುಬೈನಲ್ಲಿ ಆಚರಿಸಿಕೊಂಡರು. ಅಭಿಷೇಕ್ ಬಚ್ಚನ್ ಪತ್ನಿಯ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಭೋಪಾಲ್‌ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಅಜ್ಜಿಯನ್ನು ಭೇಟಿ ಮಾಡಿದರು. ಜಯಾ ಬಚ್ಚನ್ ಅವರ ತಾಯಿಯನ್ನು ನೋಡಲು ಹೋಗಿದ್ದರು. ಜಯಾ ಬಚ್ಚನ್ ಅವರ ತಾಯಿ ಇಂದಿರಾ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿದ್ದರು, ಆದರೆ ನಂತರ ಅವರ ಸ್ಥಿತಿ ಸ್ಥಿರವಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ವಿಚ್ಛೇದನದ ವದಂತಿಗಳಿಂದಾಗಿ ಇಬ್ಬರು ಸುದ್ದಿಯಲ್ಲಿದ್ದಾರೆ. ಸದ್ಯಕ್ಕೆ ಐಶ್ವರ್ಯಾ ಅಥವಾ ಅಭಿಷೇಕ್ ಯಾವುದನ್ನೂ ಖಚಿತಪಡಿಸಿಲ್ಲ. ನಿಮ್ರತ್ ಕೌರ್ ಜತೆಗಿನ ಸಂಬಂಧದಿಂದಾಗಿ ಐಶ್ವರ್ಯಾ ಅಭಿಷೇಕ್‌ನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವದಂತಿಗಳಿವೆ. ಆದರೆ,