More

    ಆತಂಕ, ಒತ್ತಡ ಕಳೆದುಕೊಳ್ಳಲು ಇಲ್ಲಿವೆ ಏಳು ಸುಲಭೋಪಾಯಗಳು…

    ಬೆಂಗಳೂರು: ಇತ್ತೀಚೆಗೆ ಬಹುತೇಕ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿವೆ. ಯುವ ಪೀಳಿಗೆ ಹತ್ತು ಹಲವು ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಒತ್ತಡ ಮತ್ತು ಆತಂಕದ ತೊಂದರೆ ಅನುಭವಿಸುತ್ತಿದ್ದಾರೆ. ಮಾಡುವ ಕೆಲಸದಲ್ಲಿ ನಿಗಾ ಇಡಲು ಕಷ್ಟವಾದಾಗ, ಬೇಡದ ವಿಷಯದ ಬಗ್ಗೆ ಚಿಂತೆಯಿಂದ ಬಳಲುತ್ತಿದ್ದರೆ ಮಾನಸಿಕ ಆರೋಗ್ಯದ ಬಗ್ಗೆ ನಿಗಾ ವಹಿಸುವ ಅಗತ್ಯವಿದೆ ಎಂದರ್ಥ. ಮಾನಸಿಕ ಆರೋಗ್ಯವನ್ನು ಸುಧಾರಿಸಿ, ಶಾಂತಿಯಿಂದ ಬದುಕಲು ಇಲ್ಲಿ ಕೆಲವು ದೈನಂದಿನ ಅಭ್ಯಾಸಗಳನ್ನು ತಿಳಿಸಲಾಗಿದೆ.

    1. ಸಾಕಾಗುವಷ್ಟು ನಿದ್ದೆ
    ರಾತ್ರಿ ಸರಿಯಾಗಿ ನಿದ್ದೆಯಾಗದಿದ್ದರೆ ಇಡೀ ದಿನ ಮನಸ್ಸು ಕೆಟ್ಟಿರುತ್ತದೆ. ಮನಸ್ಥಿತಿ, ಮಾನಸಿಕ ಅರಿವು, ದೈಹಿಕ ಆರೋಗ್ಯ ಇದೆಲ್ಲದರ ಮೇಲೆ ನಿದ್ದೆ ಪರಿಣಾಮ ಬೀರುತ್ತದೆ. ಒತ್ತಡದಿಂದ ಪಾರಾಗಬೇಕೆಂದರೆ ಸರಿಯಾದ ನಿದ್ದೆ ಅನಿವಾರ್ಯ.

    2. ವಿಶ್ರಾಂತಿ ತಂತ್ರಗಳು
    ಧ್ಯಾನ, ಸ್ನಾಯು ವಿಶ್ರಾಂತಿ, ಮಾರ್ಗದರ್ಶಿ ಚಿತ್ರಣ ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕು. ಪ್ರಾಣಾಯಾಮ ಮನಃ ​​ಶಾಂತಿಯ ಜತೆ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಯೋಗ ಶಕ್ತಿಶಾಲಿ ವಿಶ್ರಾಂತಿ ತಂತ್ರ ಮತ್ತು ಸ್ಟ್ರೆಸ್​​-ಬಸ್ಟರ್ ಆಗಿದೆ.

    3. ಸಾಮಾಜಿಕ ಚಟುವಟಿಕೆ
    ಶಾಲಾ ಸ್ನೇಹಿತರು, ಕಚೇರಿಯ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಇದರ ಹೊರತಾಗಿ, ಆಸಕ್ತಿಗೆ ತಕ್ಕ ಸಮುದಾಯಗಳಿಗೆ ಸೇರುವ ಮೂಲಕ ಅಥವಾ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಾಮಾಜಿಕ ನೆಟ್‌ವರ್ಕ್ ಅನ್ನು ನಿರ್ಮಿಸಬಹುದು. ಇದರಿಂದ ಅಗತ್ಯವಿರುವ ಜನರು ನಿಮ್ಮನ್ನು ಬೆಂಬಲಿಸಬಹುದು ಮತ್ತು ನಿಮ್ಮ ಸಮಸ್ಯೆಗಳನ್ನು ಕೇಳುವ ಜನರು ಸಿಗುತ್ತಾರೆ.

    4. ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿ
    ವ್ಯಕ್ತಿತ್ವದಲ್ಲಿ ಕೌಶಲ್ಯವನ್ನು ಹೊಂದಿದ್ದರೆ, ಬಿಡುವಿನ ವೇಳೆಯಲ್ಲಿ ಅದನ್ನು ಸುಧಾರಿಸಲು ಪ್ರಯತ್ನಿಸಬೇಕು. ಕೆಲವರು ತುಂಬಾ ಸೃಜನಶೀಲರಾಗಿರುತ್ತಾರೆ ಆದರೆ ಅವರು ಸಂಪೂರ್ಣ ಸಮಯವನ್ನು ಟೆನ್ಷನ್‌ನಲ್ಲಿ ಕಳೆಯುತ್ತಾರೆ. ನೆಚ್ಚಿನ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಉತ್ತಮ. ಕೆಲಸ ಮತ್ತು ಕುಟುಂಬದ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದರಿಂದ ಒತ್ತಡದ ಮಟ್ಟ ಕಡಿಮೆಯಾಗುತ್ತದೆ.

    5. ನಿಮ್ಮನ್ನು ನೀವು ನೋಡಿಕೊಳ್ಳಿ
    ಎಲ್ಲಾ ರೀತಿಯಲ್ಲೂ ನಿಮಗೆ ಸಮಯವನ್ನು ನೀಡಿ ಅಥವಾ ನಿಮ್ಮನ್ನು ಪೋಷಿಸಿಕೊಳ್ಳಬಹುದು. ಅದು ಆಹಾರ ಅಥವಾ ಪ್ರಯಾಣವಾಗಿರಬಹುದು. ಉದಾಹರಣೆಗೆ, ನಿಧಾನವಾಗಿ ತಿನ್ನಿರಿ ಮತ್ತು ಆಹಾರವನ್ನು ಪೂರ್ಣ ಆನಂದದಿಂದ ಸವಿಯಿರಿ. ಭಾವನೆಗಳ ಮೇಲೆ ಕೇಂದ್ರೀಕರಿಸಬೇಕು. ಪಾರ್ಕ್​ನಲ್ಲಿ ವಾಕ್​​​ ಮಾಡುತ್ತಾ ನೆಚ್ಚಿನ ಹಾಡುಗಳನ್ನು ಆಲಿಸುವುದು ಮಾನಸಿಕ ಶಾಂತಿಯನ್ನು ಹೆಚ್ಚಿಸುತ್ತದೆ.

    6. ಒತ್ತಡವನ್ನು ತೆಗೆದುಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಹಾಳು ಮಾಡಬಾರದು
    ಯಾವುದಾದರೂ ಕಾರಣದಿಂದ ಒತ್ತಡಕ್ಕೆ ಒಳಗಾಗುವಾಗ, ಅದರ ಬಗ್ಗೆ ಶಾಂತವಾಗಿ ಯೋಚಿಸಿ ಮತ್ತು ಅದನ್ನು ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಒತ್ತಡದ ಸಂದರ್ಭಗಳು ಕೆಡಕಾಗಲು ಬಿಡಬಾರದು. ಮನೆಯ ಸದಸ್ಯರಿಗೆ ಸಂಬಂಧಿಸಿದಂತೆ ಯಾವುದೇ ಟೆನ್ಷನ್ ಇದ್ದರೆ, ಕೂತು ಮಾತಾಡಬೇಕು. ಮಾತುಕತೆಯಿಂದ ಮಾತ್ರ ಪರಿಹಾರ ಸಿಗುತ್ತದೆಯೇ ಹೊರತು ಟೆನ್ಷನ್‌ನಿಂದಲ್ಲ.

    7. ಸಹಾಯ ಅನಿವಾರ್ಯವಿದ್ದರೆ ಬೇರೆಯವರನ್ನು ಕೇಳಿ
    ಕೆಲವೊಮ್ಮೆ ಸಮಸ್ಯೆಯನ್ನು ಬೇರೆಯವರಿಗೆ ಹೇಳಿದಾಗ, ಪರಿಹಾರ ಬೇಗ ಸಿಗುತ್ತದೆ. ಆದ್ದರಿಂದ ಸ್ನೇಹಿತರು, ಮಕ್ಕಳು, ಸಂಗಾತಿಯನ್ನು ಸಹಾಯ ಕೇಳಲು ಹೆದರಬಾರದು. ಇನ್ನೂ ಒತ್ತಡ ಮತ್ತು ಆತಂಕ ಹೆಚ್ಚಾದರೆ ಮನೋವೈದ್ಯರನ್ನು ಭೇಟಿ ಮಾಡುವುದು ಅಗತ್ಯ. (ಏಜೆನ್ಸೀಸ್​)

    ಚಂದನವನಕ್ಕೆ ಅನುಪಂ ಖೇರ್​; ‘ಘೋಸ್ಟ್​’ ಚಿತ್ರದಲ್ಲಿ ಪ್ರಮುಖ ಪಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts