Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು ಚಪ್ಪರಿಸಿಕೊಂಡು ತಿನ್ನುವವರು ಬಹಳ ಮಂದಿಯಿದ್ದಾರೆ. ತಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹಲವರು ತುಪ್ಪ ಬಳಕೆ ಮಾಡುವುದು ಸಹಜ. ತುಪ್ಪವಿಲ್ಲದ ಊಟ ರುಚಿಯಿಲ್ಲ ಎಂದು ಹೇಳುವ ಮಂದಿ ನಮ್ಮಲ್ಲೇ ಹೆಚ್ಚು.
ಇದನ್ನೂ ಓದಿ: ಅಹಮದಾಬಾದ್ ಏರ್ಪೋಟ್ ಬಳಿ Air India ವಿಮಾನ ಪತನ: ಮಾಜಿ ಸಿಎಂ ಸೇರಿ 242 ಮಂದಿ ದುರಂತ ಸಾವು! Ahmedabad plane crash
ತುಪ್ಪದ ಬಗ್ಗೆ ಅನೇಕ ಜನರಿಗೆ ಇರುವ ಅನುಮಾನ ಏನೆಂದರೆ, ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ ಎಂಬ ಭಾವನೆ. ಆದರೆ, ತಜ್ಞರು ಹೇಳುವಂತೆ ಅಸಲಿ ಅಥವಾ ಶುದ್ಧ ತುಪ್ಪ ಸೇವನೆಯಿಂದ ಅಂತಹ ಸಮಸ್ಯೆಯೇನು ಇಲ್ಲ. ತುಪ್ಪವು ದೇಹದಲ್ಲಿನ ಕೊಬ್ಬಿನಾಂಶ ನಿಯಂತ್ರಿಸುವಲ್ಲಿ ಮುಂದು. ಈಗ ತುಪ್ಪ ತಿನ್ನುವುದರಿಂದಾಗುವ ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳೇನು ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಬೆಳಗ್ಗೆ ಹೊತ್ತು ತುಪ್ಪ ಸೇವಿಸಬಹುದಾ?
ಬೆಳಗ್ಗೆ ಸಮಯದಲ್ಲಿ ತುಪ್ಪ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗಿದೆ. ತುಪ್ಪವು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕುಂಠಿತಗೊಳಿಸುತ್ತದೆ.
ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಯಕೃತ್ತಿನಲ್ಲಿ ಕೀಟೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ಶಕ್ತಿಯನ್ನು ಒದಗಿಸುತ್ತದೆ ಮತ್ತು ಗ್ಲೂಕೋಸ್‌ನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲವು ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ರೋಗಕಾರಕಗಳ ವಿರುದ್ಧ ರಕ್ಷಣೆಯನ್ನು ಹೆಚ್ಚಿಸುತ್ತದೆ. ಊಟಕ್ಕೆ ಮೊದಲು ತುಪ್ಪ ತಿನ್ನುವುದು ಕೆಲವು ಸೋಂಕುಗಳನ್ನು ತಡೆಯಲು ಸಹಕಾರಿ.
ಇದನ್ನೂ ಓದಿ: Actress Manvitha Interview | ಈ ನೋವನ್ನ ಹೇಳೋಕೂ ಆಗಲ್ಲ, ಇದು ನನ್ನ ಜೀವನದ ದುರಂತ ಮಾನ್ವಿತಾ ಭಾವುಕ
ತುಪ್ಪ ಮೂಳೆ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಜೀವಸತ್ವಗಳು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುತ್ತವೆ. ಇದು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ತುಪ್ಪದಲ್ಲಿರುವ ಶಾರ್ಟ್-ಚೈನ್ ಕೊಬ್ಬಿನಾಮ್ಲಗಳು ಕೀಲುಗಳ ಉರಿಯೂತವನ್ನು ನಿಯಂತ್ರಣಗೊಳಿಸುತ್ತದೆ ಎಂದು ಸಂಶೋಧನೆ ತೋರಿಸಿದೆ,(ಏಜೆನ್ಸೀಸ್).
ಏನಿದು ಬ್ಲ್ಯಾಕ್ ಬಾಕ್ಸ್!? ದುರಂತಕ್ಕೀಡಾದ ವಿಮಾನದಲ್ಲಿ ಇದು ಸಿಕ್ಕರೆ ಅಪಘಾತದ ಕಾರಣಗಳು ಬಹಿರಂಗ | Black Box