ಕಂಪ್ಲಿ: ಪಟ್ಟಣದ ಪೊಲೀಸ್ ಠಾಣೆಗೆ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ತುಂಗಭದ್ರಾ ನದಿ ಶಿಥಿಲಗೊಂಡಿದ್ದು ಬೃಹತ್ ವಾಹನಗಳ ಸಂಚಾರ ನಿಯಂತ್ರಿಸಬೇಕಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೋಭಾರಾಣಿ ಅವರು, ಭಾರಿ ವಾಹನಗಳ ಓಡಾಟ ನಿಯಂತ್ರಣ ಮಾಡುವುದು ಆರ್‌ಟಿಒ ಅಧಿಕಾರಿಗಳ ಕೆಲಸವಾಗಿದ್ದು, ಅವರು ಗಮನಹರಿಸಬೇಕಿದೆ. ಇಲ್ಲಿನ ದೇವಸಮುದ್ರ ಕ್ರಾಸ್ ಬಳಿ ವೇಗ ನಿಯಂತ್ರಣ ಯಂತ್ರ ಅಳವಡಿಸಿ, ಎಂಟು ಜನ ವಾಹನ ಸವಾರರನ್ನು ಗುರುತಿಸಿ ದಂಡ ವಿಧಿಸಲಾಗಿದೆ.
ಪ್ರಕರಣ ಸಂಖ್ಯೆ, ಇತ್ಯಾದಿ ಪರಿಶೀಲಿಸಿ ತಾಲೂಕಿನಲ್ಲಿ ಇನ್ನೊಂದು ಪೊಲೀಸ್ ಠಾಣೆ ತೆರೆಯುವ ಬಗ್ಗೆ ಯೋಚಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ತೋರಣಗಲ್ಲು ವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖಲೆ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಬಿ.ವಾಸುಕುಮಾರ್ ಇದ್ದರು.