More

    ಯೋಧನ ಮದುವೆಗೆ ಅಡ್ಡಿಪಡಿಸಿದ ಭಾರಿ ಹಿಮಪಾತ

    ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಹಿಮಪಾತದಲ್ಲಿ ಸಿಲುಕಿಕೊಂಡ ಯೋಧನೋರ್ವ ತನ್ನ ಮದುವೆಯನ್ನೇ ತಪ್ಪಿಸಿಕೊಂಡಿದ್ದಾರೆ.

    ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ನಿವಾಸಿ ಸುನಿಲ್ ಕಳೆದ ಗುರುವಾರ ಮತ್ತು ಶುಕ್ರವಾರ ನಿಗದಿಯಾಗಿತ್ತು. ಅವರ ಮನೆಯಲ್ಲಿ ಮದುವೆ ತಯಾರಿ ಒಂದು ವಾರದಿಂದಲೇ ಆರಂಭವೂ ಆಗಿತ್ತು. ಗುರುವಾರ ಸಂಜೆ ಖೈರ್ ಗ್ರಾಮದಿಂದ ಮಂಡಿವರೆಗೆ ಮದುವೆಯ ಬರಾತ್ ಮೆರವಣಿಗೆ ನಿಯೋಜಿಸಲಾಗಿತ್ತು. ಆದರೆ, ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನಿಲ್, ತೀವ್ರ ಹಿಮಪಾತದ ಕಾರಣ ಗುರುವಾರ ಸಂಜೆಯಾದರೂ ತಮ್ಮೂರಿಗೆ ಬರಲು ಆಗಲಿಲ್ಲ. ಇತ್ತ ಸುನಿಲ್ ಮತ್ತು ವಧುವಿನ ಮನೆಯಲ್ಲಿ ಆತಂಕ ಮನೆ ಮಾಡಿತ್ತು. ಅದರೆ, ಹವಾಮಾನ ವೈಪರೀತ್ಯದ ಕಾರಣ ಬರಲು ಆಗಿಲ್ಲ ಸುನಿಲ್ ಹೇಳಿದ ಮೇಲೆ ಸಮಾಧಾನಗೊಂಡರು ಮತ್ತು ಅನಿವಾರ್ಯವಾಗಿ ವಿವಾಹ ರದ್ದು ಮಾಡಿ, ಮದುವೆಗೆ ಮತ್ತೊಂದು ದಿನಾಂಕ ಗೊತ್ತುಮಾಡಲು ನಿಶ್ಚಯಿಸಿದ್ದಾರೆ.

    ಸುನೀಲ್​ರ ಜನವರಿ ಮೊದಲ ವಾರದಿಂದಲೇ ರಜೆ ಪಡೆದಿದ್ದರು. 1ರಿಂದಲೇ ಆರಂಭವಾಗಿದ್ದು, ಕಳೆದ ಐದು ದಿನಗಳ ಹಿಂದೆ ಅವರು ಬಂಡಿಪೋರಾದ ಕ್ಯಾಂಪ್​ಗೂ ಬಂದಿದ್ದರು. ಆದರೆ ಹಿಮಪಾತ ಉಂಟಾಗಿ ರಸ್ತೆ ಮತ್ತು ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ಸುನಿಲ್ ಬಡಿಪೋರಾದಲ್ಲೇ ಸಿಲುಕಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts