More

    ಜೆಎನ್​ಯು ಸುತ್ತ ಪೊಲೀಸ್​ ಬಿಗಿ ಭದ್ರತೆ, ಮಾಧ್ಯಮ ಪ್ರವೇಶ ನಿಷೇಧ; ದಾಳಿ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಲವೆಡೆ ಪ್ರತಿಭಟನೆ

    ನವದೆಹಲಿ: ಇಲ್ಲಿನ ಜವಾಹರ ಲಾಲ್​ ನೆಹರೂ ವಿಶ್ವವಿದ್ಯಾಲಯಕ್ಕೆ ಭಾನುವಾರ 50 ಜನರ ಗುಂಪೊಂದು ನುಗ್ಗಿ ವಿದ್ಯಾರ್ಥಿಗಳು, ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದು ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ.

    ಇಂದು ಜೆಎನ್​ಯು ಸುತ್ತಮುತ್ತ ಪೊಲೀಸ್​ ಬಿಗಿ ಭದ್ರತೆ ಒದಗಿಸಲಾಗಿದೆ. ಸರಿಯಾದ ಐಡಿ ಕಾರ್ಡ್​ ಹೊಂದಿರುವ ವಿದ್ಯಾರ್ಥಿಗಳನ್ನು ಮಾತ್ರ ಕ್ಯಾಂಪಸ್​ ಒಳಗೆ ಬಿಡಲಾಗುತ್ತಿದೆ. ಹಾಸ್ಟೆಲ್​, ವಿವಿ ಆಡಳಿತ ಮಂಡಳಿ ಕಚೇರಿ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ಯಾಂಪಸ್ ಒಳಗೆ ಮಾಧ್ಯಮ ಸಿಬ್ಬಂದಿ ಪ್ರವೇಶವನ್ನ ನಿಷೇಧಿಸಲಾಗಿದೆ.

    ಜೆಎನ್​ಯು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಮುಂಬೈನ ಗೇಟ್​ವೇ ಆಫ್ ಇಂಡಿಯಾ ಬಳಿ ನಿನ್ನೆ ಮಧ್ಯರಾತ್ರಿ ಶುರುವಾದ ದಿಢೀರ್​ ಪ್ರತಿಭಟನೆ ಇಂದು ಬೆಳಗ್ಗೆ ಕೂಡ ಮುಂದುವರಿದಿದೆ. ಪುಣೆಯ ಎಫ್​ಟಿಐಐ ಕ್ಯಾಂಪಸ್​ನಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಕೈಯಲ್ಲಿ ರಾಷ್ಟ್ರಧ್ವಜ, ಬ್ಯಾನರ್​ಗಳು, ಕ್ಯಾಂಡಲ್​ಗಳನ್ನು ಹಿಡಿದ ಪ್ರತಿಭಟನಾಕಾರರು ಜೆಎನ್​ಯು ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ.

    ಈ ಮಧ್ಯೆ ಜೆಎನ್​ಯು ಉಪಕುಲಪತಿ ಎಂ.ಜಗದೀಶ್​ ಕುಮಾರ್​ ಅವರು ವಿದ್ಯಾರ್ಥಿಗಳು ಶಾಂತಿಯಿಂದ ಇರಬೇಕು ಎಂದು ಹೇಳಿದ್ದಾರೆ. ವಿವಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಾವು ಕಾಳಜಿ ವಹಿಸುತ್ತೇವೆ. ಸೆಮಿಸ್ಟರ್​ಗಳೂ ಯಾವುದೇ ಅಡಚಣೆಯಿಲ್ಲದೆ ನಡೆಯುತ್ತವೆ. ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ ರಕ್ಷಣೆಯೇ ವಿವಿಯ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

    ಜೆಎನ್​ಯುಗೆ ನುಗ್ಗಿದ ಉದ್ರಿಕ್ತರ ಗುಂಪಿನಿಂದ ಹಲ್ಲೆ; ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts