ನವದೆಹಲಿ: ಪ್ರಸ್ತುತ ಈಶಾನ್ಯ ಅಸ್ಸಾಂನಲ್ಲಿ ನೆಲೆಗೊಂಡಿರುವ ಚಂಡಮಾರುತದ ಪರಿಚಲನೆಯು ಬಂಗಾಳಕೊಲ್ಲಿಯಿಂದ ನೈಋತ್ಯ ಮತ್ತು ದಕ್ಷಿಣದ ಮಾರುತಗಳೊಂದಿಗೆ ಸೇರಿ ಈಶಾನ್ಯ ರಾಜ್ಯಗಳ ಹವಾಮಾನದ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ.
ಇದನ್ನು ಓದಿ: ಬಿಗ್ ಬಾಸ್ ಒಟಿಟಿ ಪ್ರಸಾರಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಕಂಪ್ಲೀಟ್ ಮಾಹಿತಿ
ಮುಂದಿನ ಐದು ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಬಿರುಗಾಳಿ ಜತೆಗೆ ಗುಡುಗು, ಮಿಂಚು ಸಮೇತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿ ಮುಂಗಾರು ಆಗಮಿಸಿದ್ದು, ನೈರುತ್ಯ ಮುಂಗಾರು ಕರ್ನಾಟಕದ ಕೆಲವು ಭಾಗಗಳು ಮತ್ತು ಕರಾವಳಿ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ, ಮಾಹೆಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಈ ವರ್ಷ ವಾಡಿಕೆಗಿಂತ ಉತ್ತಮ ಮಳೆಯಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಮಾನ್ಯಕ್ಕಿಂತ 104 ರಿಂದ 110 ಪ್ರತಿಶತದಷ್ಟು ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್)
ಮಹಾರಾಷ್ಟ್ರ ರಾಜಕಾರಣದ ಖಳನಾಯಕ ಎಂದು ಸಂಜಯ್ ರಾವತ್ ಹೇಳಿದ್ದು ಯಾರಿಗೆ?