ರಾಜ್ಯದ ಹಲವಡೆ ಸುರಿದ ಧಾರಾಕಾರ ಮಳೆ : ಕೊಡಗು ಜಿಲ್ಲೆಯಲ್ಲಿ ಸಿಡಿಲು ಬಡಿದು 10 ಮೇಕೆ ಸಾವು

ಬೆಂಗಳೂರು: ಬುಧವಾರ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಕೊಡಗಿನಲ್ಲಿ ಸಿಡಿಲು ಬಡಿದು 10 ಮೇಕೆ ಮೃತಪಟ್ಟಿವೆ.

ಜಿಲ್ಲೆಯ ತೊರೆನೂರು ಸಿ.ಹೊಸಳ್ಳಿಯಲ್ಲಿ ಸಿಡಿಲು ಬಡಿದು 10 ಮೇಕೆಗಳು ಬಲಿಯಾಗಿವೆ. ಕುರಿ ಮೇಯಿಸುತ್ತಿದ್ದ ಕುರಿಗಾಯಿ ರಂಗಶೆಟ್ಟಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಕುಶಾಲ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಅನೇಕ ಮರಗಳು ಧರೆಗುರುಳಿವೆ. ರಾಜರಾಜೇಶ್ವರಿ ನಗರ ಜೆ.ಪಿ ನಗರ, ಡಿ.ಗ್ರೂಪ್​​ ಲೇಔಟ್​​, ಲಗ್ಗೆರೆ, ಶೇಷಾದ್ರಿಪುರಂ, ಹಲಸೂರು ಸೇರಿದಂತೆ ಅನೇಕ ಕಡೆ 6 ಮರಗಳು ರಸ್ತೆಗೆ ಉರುಳಿದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *