ವಾಯು ಭಾರ ಕುಸಿತದಿಂದ ಉಳ್ಳಾಲದಲ್ಲಿ ಕಡಲ ಅಲೆಗಳ ರಭಸಕ್ಕೆ ಕೊಚ್ಚಿಹೋದ ಮನೆಗಳು

ಮಂಗಳೂರು: ವಾಯು ಭಾರ ಕುಸಿತದಿಂದ ಮಂಗಳೂರಿನ ಸಮುದ್ರದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗಿದ್ದು ಅನೇಕ ಮನೆಗಳು ಸಮುದ್ರ ಪಾಲಾಗಿವೆ.

ಉಳ್ಳಾಲದ ಕಡಲ ತೀರದಲ್ಲಿನ ಮನೆಗಳು ಅಲೆಗಳ ರಭಸಕ್ಕೆ ಕುಸಿದು ಬಿದ್ದಿರುವ ದೃಶ್ಯಗಳು ಕ್ಯಾಮೆರದಲ್ಲಿ ಸೆರೆಯಾಗಿವೆ. ಅಲ್ಲಿಯ ಜನರು ಇನ್ನೂ ಹಲವಾರು ಮನೆಗಳು ಸಮುದ್ರಪಾಲಾಗುವ ಭೀತಿಯಲ್ಲಿದ್ದಾರೆ.

ಜಿಲ್ಲೆಯ ಉಳ್ಳಾಲ, ಉಚ್ಚಿಲ, ಸೋಮೇಶ್ವರ ಸಮುದ್ರ ತೀರಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

ಉಡುಪಿ ಜಿಲ್ಲಾದ್ಯಂತ ಬುಧವಾರ ರಾತ್ರಿಯಿಂದ ಭಾರಿ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆ ಅಪಾಯ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿಯಿಡೀ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನಗರದ ರಸ್ತೆಗಳು ಜಲಾವೃತಗೊಂಡಿವೆ. ಮಳೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *