VIDEO| ಬಿರುಗಾಳಿ ಮಳೆಗೆ ಹಾರಿಹೋಗಿ ಬೈಕ್​ ಸವಾರನಿಗೆ ಬಡಿದ ನೀರಿನ ಟ್ಯಾಂಕ್: ವ್ಯಕ್ತಿಗಿಂತ ವಸ್ತುವೇ ಮುಖ್ಯವಾಯ್ತ ಜನರಿಗೆ

ಕಲಬುರಗಿ: ಮಂಗಳವಾರ ಸಂಜೆ ಜಿಲ್ಲೆಯ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಜನರು ಪ್ಲಾಸ್ಟಿಕ್​​​ ವಸ್ತುಗಳಿಗೆ ನೀಡಿದ ಬೆಲೆ ಮನುಷ್ಯತ್ವಕ್ಕೆ ನೀಡುತ್ತಿಲ್ಲ ಎಂಬ ನಿದರ್ಶನ ಈ ವಿಡಿಯೋದಲ್ಲಿ ನೋಡಬಹುದು.

ಸಂಜೆ ಬಿರುಗಾಳಿ ಸಹಿತ ಮಳೆ ಸುರಿದು ರಸ್ತೆಯ ಪಕ್ಕದಲ್ಲಿದ್ದ ಅನೇಕ ಮರಗಳು ಧರೆಗುರುಳಿವೆ. ಜೇವರ್ಗಿ ಪಟ್ಟಣದ ಜೂನಿಯರ್​​​ ಕಾಲೇಜು ಬಳಿಯ ರಸ್ತೆಯ ಪಕ್ಕದಲ್ಲಿದ್ದ ಪ್ಲಾಸ್ಟಿಕ್​​​ ಅಂಗಡಿಯಲ್ಲಿದ್ದ ದೊಡ್ಡ ಗಾತ್ರದ ನೀರಿನ ಖಾಲಿ ಟ್ಯಾಂಕ್​​ ಗಾಳಿಗೆ ತೂರಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್​​ ಸವಾರನಿಗೆ ಹೊಡೆದಿದೆ.

ಅಲ್ಲಿದ್ದ ಜನರು ಬೈಕ್​​ ಸವಾರವನ್ನು ಮೇಲೆತ್ತುವ ಕೆಲಸ ಮಾಡದೇ ಪ್ಲಾಸ್ಟಿಕ್​​ ಟ್ಯಾಂಕ್​​​​ಗಳನ್ನು ಹಿಡಿಯುವಲ್ಲಿ ಹಾಗೂ ಮೊಬೈಲ್​​ನಲ್ಲಿ ವಿಡಿಯೋ ತೆಗೆಯುವಲ್ಲಿ ನಿರತರಾಗಿ ಮಾನವೀಯತೆ ಮರೆತಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *