More

    ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ 2 ದಿನ: ಯೆಲ್ಲೋ ಅಲರ್ಟ್

    ಬೆಂಗಳೂರು: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಬುಧವಾರ ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆಯಾಗಿದೆ.

    ಹಲವು ಬಡಾವಣೆಗಳಲ್ಲಿ ಮರದ ರೆಂಬೆ- ಕೊಂಬೆಗಳು ಬಿದ್ದಿವೆ. ಸಂಜೆ ನಂತರ ವಾಹನ ಸಂಚಾರ ವಿರಳ ವಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸಿದರು.

    ಯೆಲ್ಲೋ ಅಲರ್ಟ್: ಜು.9 ಮತ್ತು 10ರಂದು ನಗರದಲ್ಲಿ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಈ ಅವಧಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಎಲ್ಲೆಲ್ಲಿ ಎಷ್ಟು ಮಳೆ?: ಆನೇಕಲ್​ನಲ್ಲಿ 41 ಮಿ.ಮೀ, ದೊಡ್ಡಬೊಮ್ಮಸಂದ್ರ 36, ರಾಮೋಹಳ್ಳಿ 27, ಶಿವಕೋಟೆ 44, ಕೊಡಿಗೇಹಳ್ಳಿ 30, ಮಹದೇವಪುರ 27, ಹೊರಮಾವು 25, ಜ್ಞಾನಭಾರತಿ 25, ಬಸವನಪುರ 19, ರಾಮಮೂರ್ತಿನಗರ 17, ಬಾಣಸವಾಡಿ 16, ಕೆ.ಆರ್. ಪುರ 15, ಗರುಡಾಚಾರ್ ಪಾಳ್ಯ 14, ಕೋಣನಕುಂಟೆ 16, ಬೇಗೂರು 15, ಹೇರೋಹಳ್ಳಿ 16, ಹೆಸರಘಟ್ಟ 15 ಹಾಗೂ ಬನ್ನೇರುಘಟ್ಟದಲ್ಲಿ 20 ಮಿ.ಮೀ ಮಳೆಯಾಗಿದೆ.

    ಕನ್ನಡಿಯಿಂದ ಕ್ಯಾಮೆರಾ ಎದುರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts