ಸಿಲಿಕಾನ್​​ ಸಿಟಿಯಲ್ಲಿ ಅಬ್ಬರಿಸಿದ ಮಳೆರಾಯ: ಟ್ರಾಫಿಕ್​​​ ಜಾಮ್​ನಿಂದ ವಾಹನ ಸವಾರರ ಪರದಾಟ

ಬೆಂಗಳೂರು: ನಗರದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯ ಅರ್ಭಟ ಜೋರಾಗಿದ್ದು, ಶನಿವಾರ ಸಂಜೆಯೂ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ .

ಬನ್ನೇರುಘಟ್ಟ, ಗೊಟ್ಟಿಗೆರೆ, ಕಾಳೇನ ಅಗ್ರಹಾರ, ಅನೇಕಲ್​​ ಹಾಗೂ ಹಲವೆಡೆ ಅಂದಾಜು ಅರ್ಧ ಗಂಟೆ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿತ್ತು. ಹೊಸೂರು-ಚಂದಾಪುರ ಮುಖ್ಯರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್​​ ಜಾಮ್​​ ಆಗಿದೆ.

ಅನೇಕಲ್​​ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಿಂದ ಅನೇಕ ಮರಗಳು ಧರೆಗುರುಳಿವೆ. ಪಟ್ಟಣದ ರಸ್ತೆಗಳು ನೀರಿನಿಂದ ಆವೃತ್ತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. (ದಿಗ್ವಿಯ ನ್ಯೂಸ್​)

One Reply to “ಸಿಲಿಕಾನ್​​ ಸಿಟಿಯಲ್ಲಿ ಅಬ್ಬರಿಸಿದ ಮಳೆರಾಯ: ಟ್ರಾಫಿಕ್​​​ ಜಾಮ್​ನಿಂದ ವಾಹನ ಸವಾರರ ಪರದಾಟ”

Leave a Reply

Your email address will not be published. Required fields are marked *