ಸಿಲಿಕಾನ್​​ ಸಿಟಿಯಲ್ಲಿ ಅಬ್ಬರಿಸಿದ ಮಳೆರಾಯ: ವಾಹನ ಸವಾರರ ಪರದಾಟ

ಬೆಂಗಳೂರು: ಬುಧವಾರ ಸಂಜೆ ರಾಜಧಾನಿಯ ಹಲವು ಕಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್​​ ಸಿಟಿ ಜನರಿಗೆ ಮಳೆರಾಯ ತಂಪೆರೆಸಿದ್ದಾನೆ. ನಗರದ ಮೆಜೆಸ್ಟಿಕ್​​, ಕಾರ್ಪೊರೇಷನ್​​​, ಸಿಟಿ ಮಾರ್ಕೆಟ್​​, ಮಲ್ಲೇಶ್ವರಂ, ಹೆಬ್ಬಾಳ, ನಾಗವಾರ, ವಿಜಯನಗರ, ತಲಘಟ್ಟಪುರ, ಬನಶಂಕರಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಹಲವು ಕಡೆ ಗಾಳಿ ಸಹಿತ ಮಳೆಯಾಗಿದೆ.

ಸುರಿದ ಭಾರಿ ಮಳೆಯಿಂದ ರಸ್ತೆಯಲ್ಲಿ ಟ್ರಾಫಿಕ್​​ ಜಾಮ್​​ ಆಗಿ ವಾಹನ ಸವಾರರು ಪರದಾಡಿದ್ದಾರೆ. ರಸ್ತೆಯಲ್ಲಿ ಮಳೆ ನೀರಿನಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *