ಸಿಲಿಕಾನ್​​ ಸಿಟಿಯಲ್ಲಿ ಧಾರಾಕಾರ ಮಳೆ: ಧರೆಗೆ ಉರುಳಿದ ಬೃಹದಾಕಾರದ ಮರಗಳು

ಬೆಂಗಳೂರು: ನಗರದಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಹಲಸೂರು ಮತ್ತು ಗಣಪತಿಪುರಲ್ಲಿ ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.

ಜಯನಗರ 2ನೇ ಬ್ಲಾಕ್​​ನಲ್ಲಿ ಬೃಹತ್​​ ಮರ ವಿದ್ಯುತ್​​ ಕಂಬದ ಮೇಲೆ 2ನೇ ಬ್ಲಾಕ್​ನಲ್ಲಿ ವಿದ್ಯುತ್​​ ಸಂಪರ್ಕ ಕಡಿತವಾಗಿದೆ. ಹಾಗೂ ರಸ್ತೆಯ ವಾಹನ ಸವಾರರಿಗೆ ತುಂಬಾ ಅನನುಕೂಲವಾಗಿದೆ.

ರಾಜಾಜಿನಗರದ ಬಸವೇಶ್ವರ ನಗರದಲ್ಲಿ ಬೃಹದಾಕಾರದ ಮರ ಒಂದು ಕಾರು ಹಾಗೂ ಎರಡು ಬೈಕ್​​ಗಳ ಮೇಲೆ ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಕಾರ್ಪೋರೇಟರ್​​​​​ ಕೃಷ್ಣಮೂರ್ತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.

ನಗರದಲ್ಲಿ ಮಳೆಯ ಬಗ್ಗೆ ಮಾತನಾಡಿದ ಮೇಯರ್​ ಗಂಗಾಬಿಕೆ, ನಮ್ಮ ಸಿಬ್ಬಂದಿ ಮತ್ತು ಇಂಜಿನಿಯರ್​​​​​​ಗಳು ರಾತ್ರಿ ಎಲ್ಲ ಎಚ್ಚರವಾಗಿರಲಿದ್ದಾರೆ. ಎಲ್ಲೆಲ್ಲಿ ಸ್ಟಾರ್ಮ್​ ಡ್ರೈನ್​​ ಸಮಸ್ಯೆ ಇರುವುದೋ ಅಲ್ಲಿನ ನೀರನ್ನು ಬೇಗ ತೆರವುಗೊಳಿಸಬೇಕು ಮತ್ತು ರಸ್ತೆಗಳ ಮೇಲೆ ಬಿದ್ದ ಮರಗಳನ್ನು ತೆರವು ಮಾಡಬೇಕು ಎಂದು ಆದೇಶಿಸಲಾಗಿದೆ ಎಂದಿದ್ದಾರೆ.

ಕೆಂಪೇಗೌಡ ಮೆಟ್ರೋ ನಿಲ್ದಾಣದ ಬಳಿ ಕಾರಿನ ಮೇಲೆ ಮರ ಬಿದ್ದು ರಸ್ತೆ ಟ್ರಾಫಿಕ್​​ ಜಾಮ್​​ ಆಗಿದೆ. ಮರ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. (ದಿಗ್ವಿಜಯ ನ್ಯೂಸ್​)