ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಆರಂಭ, ಭಾರತದತ್ತ ಅಜೀಜ್

ಅಮೃತಸರ: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆ ಮತ್ತೆ ತಲೆ ಎತ್ತುತ್ತಿರುವ ಭೀತಿಯ ಮಧ್ಯೆ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿ ಪ್ರದೇಶದ ಪ್ರಮುಖ ದೇಶಗಳ ‘ಹಾರ್ಟ್ ಆಫ್ ಏಷ್ಯಾ’ ಈ ಪವಿತ್ರ ನಗರದಲ್ಲಿ ಶನಿವಾರ ಆರಂಭಗೊಂಡಿತು.

40 ರಾಷ್ಟ್ರಗಳು ಪಾಲ್ಗೊಳ್ಳುತ್ತಿರುವ ಈ ಸಮಾವೇಶವು ಐರೋಪ್ಯ ಒಕ್ಕೂಟ ಮಾದರಿಯ ಗುಂಪು ರಚಿಸುವ ಸಾಧ್ಯತೆಯತ್ತ ವಾಲುವ ಲಕ್ಷಣಗಳೂ ಇವೆ. ಭಯೋತ್ಪಾದನೆ, ಘರ್ಷಣೆಗಳಿಂದ ತತ್ತರಿಸಿರುವ ಆಫ್ಘಾನಿಸ್ಥಾನ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಕ್ರಮಗಳು ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಪ್ರಮುಖವಾಗಿ ರ್ಚಚಿತವಾಗಲಿವೆ.

ಭಾರತ, ಚೀನಾ, ರಷ್ಯಾ, ಇರಾನ್ ಮತ್ತು ಪಾಕಿಸ್ತಾನ ಸೇರಿದಂತೆ 14 ರಾಷ್ಟ್ರಗಳು ಮತ್ತು 17 ಬೆಂಬಲಿಗ ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಭಯೋತ್ಪಾದನೆ, ತೀವ್ರವಾದ ಮತ್ತು ಉಗ್ರವಾದದ ಜೊತೆಗೆ ವ್ಯವಹರಿಸುವ ವಿಧಾನಗಳ ಬಗ್ಗೆ ಶನಿವಾರ ಚರ್ಚೆ ನಡೆಸಿದ್ದಾರೆ. ಈ ಮಧ್ಯೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರು ಪಾಕ್ ನಿಯೋಗದ ನೇತೃತ್ವ ವಹಿಸಿಕೊಂಡು ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿದ್ದಾರೆ ಎಂದು ಇಸ್ಲಾಮಾಬಾದ್ ವರದಿ ತಿಳಿಸಿವೆ.

ಏಜನ್ಸೀಸ್.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *