More

    ಹೃದಯದ ಆರೋಗ್ಯ ತುಂಬ ಮುಖ್ಯ

    ಶಿರಸಂಗಿ: ಮಾನವನ ಶರೀರದಲ್ಲಿ ಹೃದಯ ಮುಖ್ಯ ಅಂಗ. ಹಾಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ತುಂಬ ಮುಖ್ಯ ಎಂದು ಮುಳ್ಳೂರಿನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಸಮೀಪದ ಕಲ್ಲಾಪುರ ಗ್ರಾಮದ ಕಲ್ಮೇಶ್ವರ ಕಲ್ಯಾಣ ಮಂಟಪದಲ್ಲಿ ಎಸ್‌ಡಿಎಂನ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಶಿರಸಂಗಿಯ ಸದೃಢ ಸಮಾಜ ನಿರ್ಮಾಣ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ದಿ. ಶ್ರೀಮತಿ ಹುಸೇನಬಿ ಮದಾರಸಾಬ ಯಲಿಗಾರ ಸ್ಮರಣಾರ್ಥ ಆಯೋಜಿಸಿದ್ದ ಹೃದಯರೋಗ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.

    ನ್ಯಾಯವಾದಿ ಎಂ.ಎಂ.ಯಲಿಗಾರ ಮಾತನಾಡಿ, ಮನುಷ್ಯನಿಗೆ ಹೃದಯಾಘಾತ ಯಾವಾಗ ಬೇಕಾದರೂ ಸಂಭವಿಸಬಹುದು. ಅಂತಹ ಸಮಯದಲ್ಲಿ ತುರ್ತು ಚಿಕಿತ್ಸೆ ಬಹಳ ಅವಶ್ಯ. ಹೃದಯಾಘಾತದ ಲಕ್ಷಣಗಳ ಬಗ್ಗೆಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

    ಗುರುಪಾದಯ್ಯ ಹಿರೇಮಠ, ಈರಯ್ಯ ಶಿವಪ್ಪಯ್ಯನಮಠ ಸಾನ್ನಿಧ್ಯ ವಹಿಸಿದ್ದರು. ಪಿಕೆಪಿಎಸ್ ನೂತನ ಅಧ್ಯಕ್ಷ ಮಹಾಂತೇಶ ಪಂಚೇನವರ ಉದ್ಘಾಟಿಸಿದರು. ಕೀರಪ್ಪ ಓಗಳಾಪುರ ಅಧ್ಯಕ್ಷತೆ ವಹಿಸಿದ್ದರು. ಪಿಕೆಪಿಎಸ್ ನಿರ್ದೇಶಕ ಮಕ್ತುಮ್ ಯಲಿಗಾರ, ಜಿ.ಟಿ. ಧಡೆಮ್ಮನವರ, ಯಲ್ಲಪ್ಪ ಚಂದರಗಿ, ಈರಪ್ಪ ಮುನವಳ್ಳಿ, ಹನುಮಂತ ಹೂಲಿ, ಕೆ.ಬಿ. ಪಾಟೀಲ, ಕೆ.ಕೆ. ಗೋಸಬಾಳ, ಮಾರುತಿ ಮೆಳವಂಕಿ, ಎಸ್.ವಿ.ಶೆಟ್ಟರ್, ಡಾ.ವಿಜಯಲಕ್ಷ್ಮೀ ಕೊಳಕಿ, ಅಜೀಜ್ ಯಲಿಗಾರ, ಡಾ.ಗಿರಿಧರ ಹಿರೇಮಠ, ದುಂಡೇಶ ತಡಕೋಡ, ಮಲ್ಲು ಮುದ್ನೂರ, ಜಾವೇದ್ ತಾಂಬೋಳಿ, ಮೈಲಾರಿ ಅಮರಗೋಳ ಇತರರಿದ್ದರು. ಸಾಧನೆಗೈದ ಹಿರಿಯರನ್ನು ಸನ್ಮಾನಿಸಲಾಯಿತು. ಶಿವಾನಂದ ತಿಮ್ಮಾಪುರ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts