ಮಂಡ್ಯ: ‘ಕಾಂತಾರ’ ಸಿನಿಮಾ ನೋಡಿಕೊಂಡು ಹೊರಗೆ ಬರುತ್ತಿದ್ದಾಗ ಪ್ರೇಕ್ಷಕರೊಬ್ಬರಿಗೆ ಹೃದಯಾಘಾತವಾಗಿದ್ದು, ಅವರು ಚಿತ್ರಮಂದಿರದಲ್ಲೇ ಸಾವಿಗೀಡಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ನಾಗಮಂಗಲ ತಾಲೂಕಿನ ಸಾರೆಮೇಗಲಕೊಪ್ಪಲು ನಿವಾಸಿ ರಾಜಶೇಖರ್ (45) ಸಾವಿಗೀಡಾದವರು. ಮಂಡ್ಯ ಜಿಲ್ಲೆಯ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ದುರ್ಘಟನೆ ನಡೆದಿದೆ.
ಕಾಂತಾರ ಸಿನಿಮಾ ವೀಕ್ಷಿಸಲು ಬಂದಿದ್ದ ಇವರು, ಹೊರಗೆ ಬರುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತವಾಗಿದೆ. ಕುಸಿದು ಬಿದ್ದ ಇವರು ಚಿತ್ರಮಂದಿರದ ಒಳಾವರಣದಲ್ಲೇ ಸಾವಿಗೀಡಾಗಿದ್ದಾರೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
31 ಪ್ರಯಾಣಿಕರಿದ್ದ ಬಸ್ ಚಾಲಕನಿಗೆ ಹೃದಯಾಘಾತ; ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್..
ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರತಿ ಮಂಗಳವಾರ ಕಾಡುವ ಸಮಸ್ಯೆ: ಗ್ರಾಮಸ್ಥರ ಪರವಾಗಿ ಸಚಿವರಿಗೆ ಮನವಿ