More

    ಧನ್ವಂತರಿ; ಆರೋಗ್ಯದಾಯಕ ಪದಾರ್ಥ ಕಾಳುಮೆಣಸು

    ಭಾರತೀಯರಾದ ನಾವು ಸಾಂಬಾರಪದಾರ್ಥಗಳನ್ನು ಹೆಚ್ಚಾಗಿಯೇ ಉಪಯೋಗಿಸುತ್ತೇವೆ. ಇವು ಅಡುಗೆಗೆ ಮಾತ್ರವಲ್ಲ; ಔಷಧೀಯ ವಸ್ತುಗಳಾಗಿ ಕೂಡ ಪ್ರಾಚೀನಕಾಲದಿಂದಲೂ ಉಪಯೋಗಿಸಲ್ಪಡುತ್ತಿವೆ. ಇಂಗು, ಓಮಕಾಳು (ಅಜವಾನ), ಲವಂಗ, ಜಾಯಿಕಾಯಿ, ಜಾಯಿಪತ್ರೆ, ಸಾಸಿವೆ, ದಾಲ್ಚಿನ್ನಿ (ಚಕ್ಕೆ), ಏಲಕ್ಕಿ, ಅರಿಶಿಣ, ಕಾಳುಮೆಣಸು, ಕೆಂಪುಮೆಣಸು, ಕೊತ್ತಂಬರಿ ಕಾಳು, ಶುಂಠಿ, ಜೀರಿಗೆ, ಮೆಂತ್ಯ, ಬಡೆಸೊಪ್ಪು (ಸೋಂಪುಕಾಳು), ಕೇಸರಿ, ಬೆಳ್ಳುಳ್ಳಿ ಇವು ಸಾಮಾನ್ಯವಾಗಿ ಬಳಕೆಯಾಗುವಂಥವು. ಇಂದು ಕಾಳುಮೆಣಸಿನ ಉಪಯುಕ್ತತೆಯ ಬಗ್ಗೆ ತಿಳಿದುಕೊಳ್ಳೋಣ.

    ಧನ್ವಂತರಿ; ಆರೋಗ್ಯದಾಯಕ ಪದಾರ್ಥ ಕಾಳುಮೆಣಸುಸಾಮಾನ್ಯವಾಗಿ ಭಾರತದ ಎಲ್ಲ ಭಾಗಗಳಲ್ಲಿಯೂ ಕಾಳುಮೆಣಸನ್ನು ಸಾಂಬಾರಪದಾರ್ಥವಾಗಿ ಬಳಕೆ ಮಾಡುತ್ತಲಿದ್ದು, ಇದು ಕಪ್ಪು ಹೊನ್ನು ಎಂದೇ ಪ್ರಚಲಿತವಾಗಿದೆ. ಇದನ್ನು ದಿನನಿತ್ಯ ಬಳಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಶೀತಪ್ರಕೃತಿಯವರ ಆರೋಗ್ಯಕ್ಕೆ ಇದು ಬಹಳ ಉತ್ತಮ. ನೋವು ನಿವಾರಕವಾಗಿಯೂ ಇದು ಕೆಲಸ ಮಾಡಬಲ್ಲದು. ಮಂಡಿನೋವು, ಭುಜದ ನೋವು, ಕಾಲು, ಕೈ ನೋವು ಇದ್ದಲ್ಲಿ ಕಾಳುಮೆಣಸನ್ನು ಅರೆದು ತೆಳ್ಳಗೆ ಹಚ್ಚುವುದರಿಂದ ನೋವು ಕಡಿಮೆ ಆಗುತ್ತದೆ. ಅನೇಕ ಆಂಟಿ ಆಕ್ಸಿಡೆಂಟ್​ಗಳನ್ನು ಇದು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಬಲ್ಲದು. ಅಲ್ಲದೆ ಸೋಂಕುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ. ಅತೀ ಸೇವನೆ ಕೆಲವರ ದೇಹಪ್ರಕೃತಿಗೆ ಕಷ್ಟವಾಗಬಹುದು.

    ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ವಿಟಮಿನ್ ಸಿ ನೈಸರ್ಗಿಕವಾಗಿ ಹೆಚ್ಚಿರುವಂಥದ್ದು ಹಸಿರು ಮೆಣಸು. ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುವುದರಿಂದ ಅವುಗಳ ರುಚಿಯನ್ನು ಹೆಚ್ಚಿಸಲು ಸಹಕಾರಿ. ಇದು ಹಣ್ಣಾದಾಗ ಒಣಗಿಸಿ ಉಪಯೋಗಿಸಲಾಗುತ್ತದೆ. ಮೂಲವ್ಯಾಧಿ ಸಮಸ್ಯೆ ಇರುವವರು ಹಸಿರು ಮೆಣಸು ಸೇವಿಸದಿರುವುದು ಉತ್ತಮ. ಒಣಮೆಣಸಿನಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅತಿಯಾಗಿ ಮೆಣಸನ್ನು ಉಪಯೋಗಿಸುವುದರಿಂದ ಹೊಟ್ಟೆಯನ್ನು ಹಾಳು ಮಾಡುವ ಸಂಭವವೂ ಇರುತ್ತದೆ. ಆದ್ದರಿಂದ ಬಳಸುವಾಗ ಎಚ್ಚರಿಕೆ ಅಗತ್ಯ. ಬಹುಶಃ ಸಾಂಬಾರಪದಾರ್ಥಗಳನ್ನು ಒಣಗಿಸಿ, ಒಣ ಜಾಗ ದಲ್ಲಿಯೇ ಶೇಖರಿಸಿಡಲಾಗುತ್ತದೆ. ಕೆಲವೊಂದು ಪದಾರ್ಥಗಳನ್ನು ಅತೀ ಹೆಚ್ಚು ಕಾಲ ಶೇಖರಿಸಿಡುವುದರಿಂದ ಅದರ ಪರಿಮಳ ಬದಲಾಗಬಹುದು, ಅದರ ಗುಣಗಳೂ ಕಡಿಮೆ ಆಗಬಹುದು. ಆದ್ದರಿಂದ ಚೆನ್ನಾಗಿ ಒಣಗಿಸಿದ ನಂತರ ಸಾಂಬಾರಪದಾರ್ಥಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಬೇಕು. ಇದರಿಂದ ಸಾಂಬಾರಪದಾರ್ಥಗಳ ಆರೋಗ್ಯ ಸಹಕಾರಿ ಗುಣಗಳು ನಷ್ಟವಾಗದಂತೆ ಹಾಗೂ ಅವು ತಾಜಾ ಇರುವಂತೆ ಕಾಪಾಡಿಕೊಳ್ಳಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts