ಕುಂದಾಪುರ: ಆರೋಗ್ಯ ತಪಾಸಣೆ ನಿಯಮಿತವಾಗಿ ಮಾಡಿಸಿಕೊಳ್ಳುವುದರಿಂದ ಆರೋಗ್ಯವಂತರಾಗಿ ಜೀವನ ನಡೆಸಬಹುದು ಎಂದು ಕುಂದಾಪುರ ತಾಲೂಕು ಆರೋಗ್ಯ ಸಹಕಾರಿ ಸಂಘ ಅಧ್ಯಕ್ಷ ವಾಸುದೇವ ಯಡಿಯಾಳ್ ಹೇಳಿದರು.
ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ವಠಾರದಲ್ಲಿ ಬೃಹತ್ ಆರೋಗ್ಯ ತಪಾಸಣೆ ಉಚಿತ ಶಿಬಿರ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಆದರ್ಶ ಆಸ್ಪತ್ರೆ ವೈದ್ಯರಾದ ಡಾ.ಅರುಣ್ ಕುಮಾರ್, ಡಾ.ಸುನೀಲ್ ಮತ್ತು ಡಾ.ರಂಜಿತ್, ಡಾ.ಜಯರಾಮ ನಂಬಿಯಾರ್, ಹೆಮ್ಮಾಡಿ ಜನತಾ ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜು ಕಾಳಾವರ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಜಾತಾ, ಸಿಎಚ್‌ಒ ಹರಿಣಾಕ್ಷಿ, ಯುವಕ ಮಂಡಲ ಅಧ್ಯಕ್ಷ ದೀಪಕ್‌ರಾಜ್, ಯುವತಿ ಮಂಡಲ ಅಧ್ಯಕ್ಷೆ ಗೀತಾ ದೇವಾಡಿಗ, ಅನುಸೂಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮಹಾವಿಷ್ಣು ಯುವಕ ಮಂಡಲ ನರಸಿಂಹ ಗಾಣಿಗ ಸ್ವಾಗತಿಸಿ, ನಮ್ಮ ಭೂಮಿ ಸಿಡಬ್ಲುೃಸಿ ಸಂಸ್ಥೆ ನಿರ್ದೇಶಕ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ರವೀಶ ದೇವಾಡಿಗ ವಂದಿಸಿದರು.
ಆದರ್ಶ ಆಸ್ಪತ್ರೆ ಉಡುಪಿ, ಲಯನ್ಸ್ ಕ್ಲಬ್ ಕುಂದಾಪುರ, ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಮಹಾವಿಷ್ಣು ಯುವಕ ಮಂಡಲ ಹರೆಗೋಡು, ಜನತಾ ಪ್ರೌಢಶಾಲೆ ಹೆಮ್ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ-ರಕ್ತನಿಧಿ ಕುಂದಾಪುರ, ಕುಂದಾಪುರ ತಾಲೂಕು ಆರೋಗ್ಯ ಸಹಕಾರಿ ಸಂಘ, ನಮ್ಮ ಪರಸ್ಪರ ಆಸರೆ ಸೊಸೈಟಿ, ನಮ್ಮ ಭೂಮಿ ಸಿಡಬ್ಲುೃಸಿ ಸಂಸ್ಥೆ ಕನ್ಯಾನ ಆಶ್ರಯದಲ್ಲಿ ಮಹಿಷಮರ್ದಿನಿ ಯುವಕ ಮಂಡಲ ಬಗ್ವಾಡಿ, ಶ್ರೀ ನಂದಿಕೇಶ್ವರ ಯುವ ಸಮಿತಿ ಹರೆಗೋಡು, ಶ್ರೀ ಮಾರಿಕಾಂಬಾ ಯುವ ಸಮಿತಿ ಹರೆಗೋಡು, ಮಾನಸ ಯುವತಿ ಮಂಡಲ ಹರೆಗೋಡು, ಮಹಾಂಕಾಳಿ ಸಂಜೀವಿನಿ ಒಕ್ಕೂಟ ಕಟ್‌ಬೇಲ್ತೂರು, ಆಶಾಕಿರಣ ಸಂಜೀವಿನಿ ಒಕ್ಕೂಟ ಹೆಮ್ಮಾಡಿ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.