Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಬೆನ್ನುನೋವು ನಿವಾರಿಸುವ ಯೋಗಾಸನ

Wednesday, 21.11.2018, 6:26 AM       No Comments

| ಬಿ.ರಾಘವೇಂದ್ರ ಶೆಣೈ

ಬೆಂಗಳೂರು ಸ್ಮಿತಾ ಅವರಿಗೆ ಸ್ಟಾಂಡಿಲೈಟಿಸ್ ಸಮಸ್ಯೆ, ವೇದಮೂರ್ತಿ ಅವರ ತಾಯಿಗೆ ಮಂಡಿನೋವು, ಮಂಜುನಾಥರಿಗೆ ಹೃದಯಭಾಗದಲ್ಲಿ ನೋವು, ರಾಯಚೂರು ಜಿಲ್ಲೆ ಲಿಂಗಸೂಗೂರಿನ ಎಂ.ಎಲ್. ಪಾಟೀಲರಿಗೆ ಸಿಯಾಟಿಕಾ ಸಮಸ್ಯೆ. ಮಡಿಕೇರಿಯ ಸುಮಂಗಳಾ ಕುಟ್ಟಪ್ಪ ಅವರಿಗೆ ಕೆಳ ಬೆನ್ನುನೋವು. ಇವೆಲ್ಲವುಗಳಿಗೆ ಯೋಗದ ಪರಿಹಾರ ಹೀಗಿದೆ:

ಈ ಎಲ್ಲರ ಸಮಸ್ಯೆಗೂ ತಕ್ಕ ಪರಿಹಾರ ನೀಡಬಲ್ಲ ಮತ್ತು ನಿತ್ಯದ ಸಾಮಾನ್ಯ ಆರೋಗ್ಯಪಾಲನೆಗೂ ಸಹಕಾರಿ ಆಗಬಲ್ಲ ಕೆಲವು ಆಸನಗಳ ಬಗ್ಗೆ ಒಂದಷ್ಟು ವಿವರವಾಗಿ ತಿಳಿಯೋಣ. ಇವುಗಳ ನಿತ್ಯ ಅಭ್ಯಾಸವಿದ್ದರೆ ಸಮಸ್ಯೆ ದೂರ. ಆರೋಗ್ಯವಂತರು ಮಾಡಿದರೆ ಮುಂದೆ ಯಾವತ್ತೂ ಸಮಸ್ಯೆ, ನೋವು ಕಾಡದು. ಸದೃಢ ಸ್ವಾಸ್ಥ್ಯ ನಮ್ಮದಾಗುತ್ತದೆ.

ಬೆನ್ನು ಸದೃಢವಾಗಿರಲಿ: ಬೆನ್ನು ನೋವಿನಿಂದ ಮುಕ್ತವಾಗಿರಲು ಎಲ್ಲ ವಯೋಮಾನದವರಿಗೂ ಸಾಧ್ಯವಿದೆ. ನಮ್ಮ ನಿತ್ಯದ ಜೀವನಕ್ರಮದಲ್ಲಿ ಕೆಲವನ್ನು ನಾವು ಸದಾ ಪಾಲಿಸಬೇಕು. ಬೆನ್ನುಮೂಳೆಗೆ ಶಕ್ತಿ, ಸ್ಥಿರತೆಯನ್ನು ಕೊಡಬಲ್ಲ ಹಾಗೂ ನಮ್ಮ ಶಾರೀರಿಕ ನಿಲುವನ್ನು ಸರಿಪಡಿಸುವ, ಹೊಟ್ಟೆಯ ಹಾಗೂ ಬೆನ್ನಿನ ಸ್ನಾಯುಗಳಿಗೆ ಬಲ ಕೊಡುವ ಯೋಗಾಸನಗಳ ಅಭ್ಯಾಸ ಮಾಡಬೇಕು. ಎಲ್ಲರೂ ತಮ್ಮ ಶಾರೀರಿಕ ಕ್ಷಮತೆ, ಕಠಿಣತೆಯನ್ನು ಅರಿತು ಸುಲಭಸಾಧ್ಯವಾಗುವ ರೀತಿಯಲ್ಲಿ ಸಲಕರಣೆಗಳನ್ನು ಉಪಯೋಗಿಸಿ ಯೋಗಾಸನಗಳನ್ನು ಮಾಡಬೇಕು. ಮುಂದೆ ಇದನ್ನು ವಿವರಿಸಲಾಗುವುದು.

ಕೆಳಬೆನ್ನುನೋವು ಭೌತಿಕ ದೋಷದಿಂದ ಅಧಿಕ ಪ್ರಮಾಣದಲ್ಲಿ ಬರುತ್ತದೆ. ಇಡೀ ಶರೀರದಲ್ಲಿರುವ ಸ್ನಾಯುಗಳಲ್ಲಿ ಬೆನ್ನಿನಲ್ಲಿರುವ ಸ್ನಾಯುಗಳು ಅತ್ಯಂತ ದೊಡ್ಡದು. ಈ ಸ್ನಾಯುಗಳಲ್ಲಿ ಸ್ಥಿರತೆಯುಳ್ಳ, ಬಳುಕುವ, ಹಿಗ್ಗುವ ಮತ್ತು ತಿರುಗುವ ಗುಣಗಳನ್ನು ಬೆಳೆಸಬೇಕು. ಇದು ತಪ್ಪಿದ್ದೇ ಆದರೆ ಅನೇಕ ರೀತಿಯ ನೋವುಗಳಿಗೆ ಕಾರಣವಾಗುತ್ತದೆ.

ಈ ರೀತಿಯ ನೋವುಗಳಿಗೆ ಯೋಗಚಿಕಿತ್ಸೆಯ ಮೂಲಕ ತುಂಬ ಸುಲಭವಾಗಿ ನಿಶ್ಚಿತವಾಗಿ ಪರಿಹಾರ ದೊರಕುತ್ತದೆ. ಮಾಡುವವರ ಪ್ರಯತ್ನ, ಧೈರ್ಯ, ನಂಬಿಕೆ ಮತ್ತು ಯಾವ ರೀತಿಯ ದೋಷವಿದೆ ಎಂದು ತಿಳಿದುಕೊಂಡು ಹೇಳಿಕೊಡುವ ತಜ್ಞ ಯೋಗಚಿಕಿತ್ಸಕರ ಪೂರ್ಣ ಸಹಕಾರ ಕೂಡ ಇದಕ್ಕೆ ಬೇಕು. ಸಮಸ್ಯೆ ಇದ್ದವರು ಅಂಥವರ ಸಮ್ಮುಖವೇ ಅಭ್ಯಾಸ ಮಾಡಬೇಕು.

ನೋವಿಗೆ ಕಾರಣಗಳು: ಕುಳಿತುಕೊಳ್ಳುವಾಗ, ನಿಂತುಕೊಳ್ಳುವಾಗ, ಕೆಲಸ ಮಾಡುವಾಗ ಆಗಿರುವ ವ್ಯತ್ಯಾಸಗಳಿಂದ ಸ್ನಾಯುಗಳಲ್ಲಿ ಸೆಳೆತ, ಬಿಗಿತ ಉಂಟಾಗಿ ನೋವಿಗೆ ಕಾರಣವಾಗುತ್ತದೆ. ಬೆನ್ನುಮೂಳೆಯಲ್ಲಿರುವ ಬಿಲ್ಲೆಗಳ (ವರ್ಟಬ್ರೇಟ್) ಸವೆತ. ಬಿಲ್ಲೆಗಳ ನಡುವಿನ ಪದರ (ಡಿಸ್ಕ್) ಹೊರಕ್ಕೆ ಬಂದು ನರಗಳಿಗೆ ತಾಗುವುದು. ಬಿಲ್ಲೆಗಳ ನಡುವಿನ ಸಹಜ ಅಂತರ(ನಾರ್ಮಲ್ ಸ್ಪೇಸ್) ಕಡಿಮೆಯಾಗಿ ಪರಸ್ಪರ ಉಜ್ಜುವುದರಿಂದ ಅತಿಯಾದ ನೋವು. ಕೆಳಬೆನ್ನಿನ ಮೂಳೆಯು ತನ್ನ ಸಹಜ ಬಾಗುವಿಕೆ ಕಳೆದುಕೊಂಡಿರುವುದು. ಬೆನ್ನುಮೂಳೆಯನ್ನು ಅತಿಯಾಗಿ ಬಾಗಿಸಿದ್ದರಿಂದ ನೋವು ಉಂಟಾಗುವುದು. ಹುಟ್ಟುವಾಗಲೇ ಬೆನ್ನುಮೂಳೆಯಲ್ಲಿನ ವಕ್ರತೆ(ಕೊಲಿಯೋಸಿಸ್). ಬೆನ್ನುಮೂಳೆಯಲ್ಲಿ ನಿಧಾನಗತಿಯಲ್ಲಿ ಉಂಟಾಗುವ ಇನ್​ಫ್ಲಮೇಷನ್​ನಿಂದ ಬೆನ್ನು ಅತಿಯಾಗಿ ಮುಂದೆ ಬಾಗುವುದು ಅಥವಾ ಗೂನಾಗುವುದು. ಸಯಾಟಿಕಾ ನರ ಅತಿಯಾಗಿ ಹಿಗ್ಗಿ ಉಂಟಾಗುವ ನೋವು.

ಪರಿಹಾರವೇನು?: ಜಠರ ಪರಿವರ್ತನಾಸನ, ಕಿಟಕಿ ಹಿಡಿದು ಉತ್ಕಟಾಸನ. ನಿಂತು ಮಾಡುವ ಮರೀಚಾಸನ ಮತ್ತು ಪವನ ಮುಕ್ತಾಸನಗಳ ಅಭ್ಯಾಸ ಮಾಡಿ.

Leave a Reply

Your email address will not be published. Required fields are marked *

Back To Top